ಲೇಖಕ ಯು.ಎನ್. ಸಂಗನಾಳಮಠ ಅವರು ರಚಿಸಿರುವ "ಕಂಡದ್ದು ಕಂಡಹಾಗೆ" ಎನ್ನುವ ಕೃತಿಯು ಸಂಸ್ಕೃತಿ ಧರ್ಮ ರಾಜಕಾರಣ ಸಾಹಿತ್ಯ ವೈಶಿಷ್ಟ ಪೂರ್ಣವಾದ ಮೌಲಿಕ ಲೇಖನಗಳ ಸಂಗ್ರಹವಾಗಿದೆ. ಸಂಸ್ಕೃತಿ, ಧರ್ಮ, ರಾಜಕಾರಣ, ಸಾಹಿತ್ಯ , ಸಮಾಜ ಮತ್ತು ಇತರ ವಿಷಯಗಳ ಮೇಲೆ ಬೆಳಕು ಚೆಲ್ಲುವ 30ಕ್ಕೂ ಹೆಚ್ಚು ಲೇಖನಗಳಿದ್ದು, ಆಗಾಗ ಸಮಯ ಸಂದರ್ಭಕ್ಕೆ ತಕ್ಕಂತೆ ಬರೆದವುಗಳಾಗಿವೆ. ಸಂಸ್ಕೃತಿ ಮತ್ತು ಇತರ ಪರಿಕಲ್ಪನೆಗಳು, ಸಾಹಿತ್ಯ ಬದುಕಿಗೆ ಪ್ರೇರಣೆ, ನೈತಿಕತೆಯ ನಾಯಕರು ಮತ್ತು ಭ್ರಷ್ಟಾಚಾರ, ನವರಸಗಳ ವಿಶ್ಲೇಷಣೆ, ಧರ್ಮವೆಂಬ ಚೈತನ್ಯ ಶಕ್ತಿ, ಧರ್ಮ ಮತ್ತು ವಿಜ್ಞಾನ ಸಂಬಂಧ, ಅನುಭವ ಮಂಟಪ ಎಂಬ ಅಧ್ಯಾತ್ಮಿಕ ವಿಶ್ವವಿದ್ಯಾಲಯ ಹೀಗೆ ಹಲವಾರು ಲೇಖನಗಳು ಓದುಗರ ಗಮನ ಸೆಳೆಯುತ್ತವೆ ನೇರ ನ್ಯಾಯ ನಿಷ್ಠುರಿ ಮನೋಧರ್ಮದ ಬರಹಗಳು ಕೃತಿಯ ಮೌಲ್ಯ ಹೆಚ್ಚಿಸಿವೆ.
ಸಾಹಿತಿ ಯು.ಎನ್. ಸಂಗನಾಳಮಠ 1949 ಅಕ್ಟೋಬರ್ 07 ಮೂಲತಃ ಧಾರವಾಡದವರು. ಸಿರಿಗನ್ನಡ ವೇದಿಕೆ ಅಧ್ಯಕ್ಷರಾಗಿದ್ದು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನನ್ಯ, ಉದಯ ಕರ್ನಾಟಕ, ಧರ್ಮ ಸುಧಾ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಬರೆದ ಅನುಭವ. ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿದ್ದು ’ಕನ್ನಡ ಡಿಂಡಿಮ’ ಅವರ ಇತ್ತಿಚಿನ ಕೃತಿ. ಉಮೇಶ್ ಎಸ್. ಎನ್. ಅವರ ಕಾವ್ಯನಾಮ. ...
READ MORE