ಕೃತಿಯ ಹೆಸರೆ ಸೂಚಿಸುವಂತೆ ಜೀವನದ ಮೌಲ್ಯಗಳ ಕುರಿತು, ಬದುಕಿನ ಕುರಿತು ಆತ್ಮವಿಶ್ವಾಸದ ಕತೆಗಳ ಮೂಲಕ ವಿವರಿಸುವ ಕೃತಿ ಇದು. ಅಂಕಣಗಳ ಸಂಕಲನವಾಗಿರುವ ಈ ಕೃತಿಯಲ್ಲಿ ಪ್ರತಿಯೊಂದು ಲೇಖನವೂ ಜೀವನದ ಮೌಲ್ಯವನ್ನು ವಿವರಿಸುತ್ತದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946 ರ ಜುಲೈ 27 ರಂದು ಮನು (ಪೆನುಗೊಂಡೆ ನರಸಿಂಹರಂಗನ್) ಜನಿಸಿದರು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ. ಮೆಕ್ಯಾನಿಕಲ್ ಎಂಜಿನಿಯರರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಾಹ್ಯ ವಿದ್ಯಾರ್ಥಿಯಾಗಿ ಎಂ.ಎ. ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಮನಃಶಾಸ್ತ್ರ) ಪದವೀಧರರು. ಮೈಸೂರಿನ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ. ನಂತರ ಕೆ.ಜಿ.ಎಫ್.ನ ಭಾರತ್ ಅರ್ಥ್‌ಮೂವರ್ಸ್‌ನಲ್ಲಿ ಸಂಶೋಧನಾ ಎಂಜಿನಿಯರಾಗಿ, ಚೆನ್ನೈನ ಬ್ರೇಕ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್ ಎಂಜನಿಯರಾಗಿ, ಪುಣೆಯ ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ ಡೆಪ್ಯುಟಿ ಡೈರೆಕ್ಟರ್ , ...
READ MORE