ಜೀನ್ಸ್ ಟಾಕ್-ಲೇಖಕಿ ಅಂಜಲಿ ರಾಮಣ್ಣ ಅವರ ಕೃತಿ. ಸಮಾಜದಲ್ಲಿ ನಡೆಯುವ ಸಣ್ಣ ಸಣ್ಣ ಸಂಗತಿಗಳು ಇಲ್ಲಿಯ ಬರೆಹಗಳ ಮೂಲ ವಸ್ತುಗಳಾಗಿವೆ. ಯುವ ಪೀಳಿಗೆಯು ಸಾಂಪ್ರದಾಯಿಕತೆಯನ್ನು ತಿರಸ್ಕರಿಸಿದರೆ ಅದಕ್ಕೆ ಪರ್ಯಾಯವಾದ ಮಾರ್ಗ ಕಂಡುಕೊಳ್ಳದೇ ತಮಗೆ ತಿಳಿದ ರೀತಿಯಲ್ಲಿ ವರ್ತನಾ ರೀತಿಯನ್ನು, ಆಲೋಚನಾ ಕ್ರಮವನ್ನು ರೂಢಿಸಿಕೊಳ್ಳುವುದು, ಇದರಿಂದ ದುರಂತಮಯವಾದ ಬದುಕನ್ನು ಅನುಭವಿಸುವುದು ಇಂತಹ ಸಂಗತಿಗಳನ್ನು ತೀಕ್ಷಣ ಒಳನೋಟದ ಮೂಲಕ ಕಟ್ಟಿಕೊಟ್ಟ ಬರೆಹಗಳ ಸಂಕಲನವಿದು.
ವಕೀಲ ವೃತ್ತಿಯೊಂದಿಗೆ ಅಂಕಣಗಳನ್ನು ಬರೆಯುತ್ತಾ, ಕಾನೂನಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿರುವ ಅಂಜಲಿ ರಾಮಣ್ಣ ಅವರು ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಮಾನವ ಹಕ್ಕುಗಳು ವಿಷಯದಡಿ ಸ್ನಾತಕೋತ್ತರ ಕಾನೂನು ಪದವೀಧರರಾಗಿರುವ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಡಿಪ್ಲೊಮಾ, ಆಪ್ತ ಸಮಾಲೋಚನೆ ಮತ್ತು ಮಕ್ಕಳ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದಾರೆ. ಮಹಿಳೆ ಹಾಗೂ ಮಕ್ಕಳ ಹಕ್ಕುಗಳು, ಶಿಕ್ಷಣ, ಕಾನೂನು, ಆರ್ಥಿಕ ಪ್ರಗತಿಗೆ ನೆರವು ಮತ್ತು ಎಚ್.ಐ.ವಿ.ಪೀಡಿತ ಮಹಿಳೆಯರ ಸಮೂಹದಲ್ಲಿ ಜಾಗೃತಿ ಮೂಡಿಸಲು ಹೋರಾಡುತ್ತಿರುವ ಅಂಜಲಿ ರಾಮಣ್ಣ, ಕರ್ನಾಟಕ ಸರ್ಕಾರದ ಬಾಲಕಿಯರ ಕಲ್ಯಾಣ ಸಮಿತಿಯ ...
READ MORE