ಎಡಪಂಥೀಯ ಚಳವಳಿಯ ನಾಯಕ ಹಾಗೂ ಲೇಖಕ ಜಿ.ಎನ್. ನಾಗರಾಜ್ ಅವರ ಕೃತಿ-ಜಾತಿ ಬಂತು ಹೇಗೆ?. ಭಾರತದಲ್ಲಿ ಜಾತಿ ಪ್ರಧಾನವಾದ ಸಾಮಾಜಿಕ ವ್ಯವಸ್ಥೆಯನ್ನು ಕೊನೆಗಾಣಿಸಲು ಸಮಾಜ ಸುಧಾರಕರು ಹೋರಾಡುತ್ತಲೇ ಬಂದಿದ್ದಾರೆ. ಇದರ ಹುಟ್ಟು ಕೆಲವೇ ವರ್ಗದ ಜನತೆಯ ಉದರ ಪೋಷಣೆಗೆ ಸೀಮಿತವಾಗಿದೆ. ಈ ವ್ಯವಸ್ಥೆಯೇ ಬಹುಸಂಖ್ಯಾತರ ಶೋಷಣೆಗೆ ಮೂಲವಾಗಿದೆ. ಈ ಕುರಿತು ಲೇಖಕರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ, ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.
ಎಡಪಂಥೀಯ ಚಿಂತನೆಗಳ ಮೂಲಕ ಕನ್ನಡಿಗರಿಗೆ ಪರಿಚಿತರಿರುವ ಜಿ.ಎನ್. ನಾಗರಾಜ್ ಅವರು ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1971 ಅಗ್ರಿ) ಹಾಗೂ ಎಂಎಸ್ಸಿ (1973) ಪದವಿ ಪಡೆದರು. ಸದ್ಯ ಕೃಷಿ ಕೂಲಿಕಾರರ ಸಂಘ ಕರ್ನಾಟಕ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ...
READ MORE