ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ಇಪ್ಪತ್ತೆಂಟು ಹಣತೆಗಳು. ಪ್ರಕೃತಿ ತತ್ವಗಳು ಹಾಗೂ ಸುಖ ಹಾಗೂ ದುಃಖಗಳ ವಿವರಣೆ ಮಾತ್ರವಲ್ಲ; ನಿತ್ಯ ಜೀವನದಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳಿಗೆ ಅಥವಾ ಸನ್ನಿವೇಶಗಳಿಗೆ ಹೇಗೆ ಸ್ಪಂದಿಸಬೇಕು, ಪ್ರತಿಕ್ರಿಯಿಸಬೇಕು, ಅವು ಯಾವುದರ ಫಲಗಳು, ನಿರ್ಲಕ್ಷಿಸಿದರೆ ಪರಿಣಾಮಗಳೇನು ಇತ್ಯಾದಿ ಅಂಶಗಳಿರುವ ವೈಚಾರಿಕ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿದೆ.
ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು. ...
READ MORE