ಮಹಾತ್ಮ ಗಾಂಧೀಜಿಯವರನ್ನು ಕುರಿತು ಹೊರತಂದಿರುವ ಈ ಕಿರು ಹೊತ್ತಿಗೆಯು ಲೇಖಕ ಡಿ.ಎಸ್. ನಾಗಭೂಷಣ ಅವರ ಐದು ಲೇಖನಗಳನ್ನು ಒಳಗೊಂಡಿರುವಂತದ್ದು. ಗಾಂಧಿಯ ಬಗ್ಗೆ ಇರುವ ಅಪಪ್ರಚಾರ, ಅವಹೇಳನಕಾರಕ ತಪ್ಪು ಕಲ್ಪನೆಗಳನ್ನು ನಿವಾರಿಸುವ ಪ್ರಯತ್ನವನ್ನೂ ಲೇಖಕರು ಇಲ್ಲಿ ಮಾಡಿದ್ದಾರೆ. ಗಾಂಧಿ ಬದುಕಿನ ಮುಖ್ಯ ಘಟ್ಟಗಳನ್ನು ನೆನಪಿಸುವ ಸಂದರ್ಭಸಹಿತ ವಿವರಣೆಗಳನ್ನೂ ಪುಸ್ತಕದ ಕೊನೆಯಲ್ಲಿ ತಿಳಿಸಲಾಗಿದೆ. ಮತ್ತು ಗಾಂಧಿದೃಷ್ಟಿಕೋನದ ನಿಲುವುಗಳನ್ನು ಲೇಖಕರು ಕಂಡುಕೊಂಡ ರೀತಿ ಪುಸ್ತಕದಲ್ಲಿದೆ. ಇದಕ್ಕೆ ಪೂರಕವಾಗಿ ಕಾರ್ಲ್ ಮಾರ್ಕ್ಸ್ ಚಿಂತನೆಯನ್ನು ಉಲ್ಲೇಖಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಗಾಂಧಿ ಮತ್ತು ಸಂಸ್ಕೃತಿಗಳ, ಗಾಂಧಿಯ ದೇಶ ಪ್ರೇಮ, ಆಹಾರ ಕ್ರಮ, ಜೀವನ ವ್ಯಕ್ತಿತ್ವ, ರಾಜಕೀಯ ಸಿದ್ಧಾಂತ, ವಿಚಾರ-ವ್ಯಕ್ತಿಗತ ಅಭಿಪ್ರಾಯ, ವೈಯಕ್ತಿಕ ಜೀವನ ಶೈಲಿ, ಅವರ ಪತ್ರ ವ್ಯವಹಾರ, ಇವೆಲ್ಲವುಗಳ ಸಂಪೂರ್ಣ ಮಾಹಿತಿಯನ್ನು ಕೃತಿ ಚಿಕ್ಕದಾಗಿ, ಚೊಕ್ಕದಾಗಿ ನೀಡಿದೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE