ಇಕ್ಕಟ್ಟು- ಬಿಕ್ಕಟ್ಟು

Author : ಕೆ. ಜಿ. ನಾಗರಾಜಪ್ಪ

Pages 228

₹ 120.00




Year of Publication: 1998
Published by: ಅನಿಕೇತನ ಪ್ರಕಾಶನ
Address: ಸಾಹಿತ್ಯಿಕ ಸಾಂಸ್ಕೃತಿಕ ಸಂಶೋಧನಾ ಕೇಂದ್ರ ತುಮಕೂರು

Synopsys

ಲೇಖಕ ಪ್ರೊ.ಕೆ.ಜಿ ನಾಗರಾಜಪ್ಪ ಅವರು ಬರೆದ ಕೃತಿ ಇಕ್ಕಟ್ಟು-ಬಿಕ್ಕಟ್ಟು. ಚಿಂತನಾರ್ಹ ಬರಹಗಳನ್ನು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದ ಹಿರಿಯ ಕವಿ ಜಿ.ಎಸ್ ಶಿವರುದ್ರಪ್ಪ, ‘ಕೆಲವು ವರ್ಷಗಳ ಹಿಂದೆ ಮರುಚಿಂತನೆ ಎಂಬ ಕೃತಿಯ ಮೂಲಕ ಸಮಾಜಶಾಸ್ತ್ರೀಯ ವಿಮರ್ಶೆಯ ಪ್ರಾತಿನಿಧಿಕ ಧ್ವನಿಯಾಗಿ, ಹೊಸ ಸಾಂಸ್ಕೃತಿಕ ವಾಗ್ವಾದಗಳಿಗೆ ಕಾರಣರಾದ ಪ್ರೊ.ಕೆ.ಜಿ ನಾಗರಾಜಪ್ಪನವರು, ಪ್ರಸ್ತುತ ಕೃತಿಯಲ್ಲಿ ನಮ್ಮ ಸಮಾಜ ಸಾಹಿತ್ಯ ಹಾಗೂ ಸಂಸ್ಕೃತಿಗಳಿಗೆ ಒದಗಿರುವ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಅತ್ಯಂತ ಕುತೂಹಲಕಾರಿಯಾದ ಚರ್ಚೆಗೆ ಗುರಿಪಡಿಸಿದ್ದಾರೆ. ನೆಲೆನಿಂತ ನಂಬಿಕೆಗಳನ್ನು, ವಿಚಾರಗಳನ್ನು, ಮಾದರಿಗಳನ್ನು ಅವು ರೂಪುಗೊಂಡ ಚಾರಿತ್ರಿಕ ಸಂದರ್ಭಗಳ ಸಮೇತ ನಿಷ್ಠುರವಾದ ವಿಮರ್ಶೆಯ ಒರೆಗಲ್ಲಿಗೆ ಉಜ್ಜಿ ನೋಡುವ ಹಾಗೂ ಕೆಳವರ್ಗದ ನೋವುಗಳ ಜತೆಗೆ, ತನ್ನನ್ನು ಗುರುತಿಸಿಕೊಳ್ಳುವ ಮನಸ್ಸೊಂದು ಮಾತ್ರ ಅನುಭವಿಸುವ ಸಂದಿಗ್ಧತೆಗಳೂ, ಎದುರಿಸುವ ಸಮಸ್ಯೆಗಳೂ ಅದು ಅನಾವರಣಗೊಳಿಸುವ ವಾಸ್ತವಗಳೂ, ಈ ಕೃತಿಯಲ್ಲಿ ಒಂದು ಬಗೆಯ ನಿರ್ಭೀತ ನಿಲುವಿನಿಂದ ದಾಖಲೆಗೊಳ್ಳುವ ಕ್ರಮ ಬೆರಗು ಹುಟ್ಟಿಸುವಂತಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಕೆ. ಜಿ. ನಾಗರಾಜಪ್ಪ
(09 January 1934)

ಕೆ. ಜಿ. ನಾಗರಾಜಪ್ಪ ಅವರು ಜನಿಸಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಲ್ಲೂರಿನಲ್ಲಿ 1934ರ ಜನೆವರಿ 9ರಂದು. ಕಲ್ಲೂರು, ಕಡಬ, ತುಮಕೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ, ಸಾಗರ, ಮೈಸೂರು, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆ. ದೊಡ್ಡಸಂಕಣ್ಣ (ಐತಿಹಾಸಿಕ ಕಾದಂಬರಿ-1962), ದೇವಾಂಗ ಸಂಸ್ಕೃತಿ (ಅಧ್ಯಯನ-1983), ಮರುಚಿಂತನೆ (ವಿಮರ್ಶೆ-1985), ಇಕ್ಕಟ್ಟು ಬಿಕ್ಕಟ್ಟು (ವಿಮರ್ಶೆ-1998) ಪ್ರಕಟಿತ ಕೃತಿಗಳು. ಅನ್ವೇಷಕ (1998) ಅಭಿನಂದನಾ ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಬೆಂಗಳೂರಿನಲ್ಲಿ ತಮ್ಮ ಪತ್ನಿಯೊಂದಿಗೆ ನೆಲೆಸಿದ್ದಾರೆ. ವೈಚಾರಿಕ ಮತ್ತು ವಿಶ್ಲೇಷಣಾತ್ಮಕವಾಗಿ ಸಂಸ್ಕೃತಿ ...

READ MORE

Related Books