ನಮ್ಮ ಸುತ್ತಮುತ್ತಲಿನ ಪರಿಸರದ ವಾಸ್ತವತೆಯ ಜೊತೆಗೆ ಮಕ್ಕಳ ಮನೋಭಾವವೂ ಬದಲಾಗಬೇಕು. ಅವರಿಗೆ ಬರೀ ಜ್ಞಾನ ನೀಡಿದರೆ ಸಾಕಾಗದು. ಅವರಿಗೆ ಮೌಲ್ಯಗಳ ಪರಿಚಯವಾಗಬೇಕು. ಆ ಮನೋಭಾವ ಮುಂದಿನ ಅವರ ಜೀವನದಲ್ಲಿ ಅಭ್ಯಾಸವಾಗಬೇಕು. ನಮ್ಮ ಸಾಂಪ್ರದಾಯಿಕ ಹಬ್ಬ ಹರಿದಿನಗಳು, ಆಚರಣೆಗಳನ್ನು ಹೊಸ ಕನ್ನಡಕದೊಂದಿಗೆ ನೋಡಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ನಾವು ಇಂದು ನಮ್ಮ ಮಕ್ಕಳಿಗೆ ಎಂತಹ ಸಂಪ್ರದಾಯ, ರೂಢಿ, ಪರಿಪಾಠಗಳನ್ನು ಹಾಕಿಕೊಡುತ್ತಿದ್ದೇವೆ ಎನ್ನುವುದು ತುಂಬಾ ಮುಖ್ಯ. ‘ಅಜ್ಜ ಹಾಕಿದ ಆಲದಮರಕ್ಕೆ ಜೋತು ಬೀಳುವುದಲ್ಲ’. ಹೊಸ ಓದು, ಹೊಸ ಜ್ಞಾನ ಮುಂದಿನ ಜನಾಂಗಕ್ಕೆ ಹೊಂದಿಕೊಳ್ಳಬೇಕಾದ ಮಾರ್ಗದರ್ಶನ ಇಂದಿನ ಮಕ್ಕಳಿಗೆ ಶೀಘ್ರ ಬೇಕಾಗಿದೆ. ಅದರೊಂದಿಗೆ ಪರಿಸರವನ್ನು ಮುಂದಿನ ಪೀಳಿಗೆಗೆ ಯಥಾಸ್ಥಿತಿಯಲ್ಲಿ ವರ್ಗಾಯಿಸಬೇಕಾದ ಕಾಳಜಿ ಮಕ್ಕಳಿಗೆ ರೂಢಿಯಾಗಬೇಕಿದೆ. ಕಳೆದ ೨೩ ವರ್ಷಗಳಿಂದ ಶಾಲೆ, ಮನೆಯ ಮಕ್ಕಳ ಮೇಲೆ ಮಾಡಿದ ಇಂತಹ ಪ್ರಯೋಗಗಳನ್ನು, ಯಶೋಗಾಥೆಗಳ ಗುಚ್ಛವೇ ‘ಹೊಸ ಪರಿಪಾಠ’ ಇದು ಮಕ್ಕಳನ್ನು ಬೆಳೆಸುವ ಪಾಲಕರಿಗೆ, ಶಿಕ್ಷಕರಿಗೆ ಮಾರ್ಗದರ್ಶಿಯಾದರೆ ಲೇಖಕರ ಶ್ರಮ ಸಾರ್ಥಕ.
ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...
READ MORE