"ಹೇ ರಾಮ್' ಭಾರತದ ಆತ್ಮಚ್ಛೇದ ಕಥನ’ ನ. ರವಿಕುಮಾರ ಅವರ ಸಂಪಾದನೆಯ ಕೃತಿಯಾಗಿದೆ. ಸ್ವಾತಂತ್ರ್ಯ ಕಾಲದ ದೇಶ ವಿಭಜನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಗಲಭೆ ಗಾಂಧೀಜಿಯವರ ಉಸಿರಾದ ಅಹಿಂಸೆಯನ್ನು ಗಾಳಿಗೆ ತೂರಿ ರಕ್ತರಂಜಿತ ಅಧ್ಯಾಯವನ್ನು ಬರೆಯಿತು. ಒಂದೇ ಮನೆಯವ ರಂತಿದ್ದ ಅವರು ಜನ್ಮಾಂತರದ ವೈರಿಗಳಾಗಿ ಮಾರ್ಪಾಡು ಹೊಂದಿದ್ದು ಹೇಗೆ ? ಎಂಬುದನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.
ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ, ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಪ್ರಕಾಶಕರ ...
READ MOREಹೊಸತು- 2004-ಫೆಬ್ರವರಿ
ಸ್ವಾತಂತ್ರ್ಯ ಕಾಲದ ದೇಶ ವಿಭಜನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಗಲಭೆ ಗಾಂಧೀಜಿಯವರ ಉಸಿರಾದ ಅಹಿಂಸೆಯನ್ನು ಗಾಳಿಗೆ ತೂರಿ ರಕ್ತರಂಜಿತ ಅಧ್ಯಾಯವನ್ನು ಬರೆಯಿತು. ಒಂದೇ ಮನೆಯವ ರಂತಿದ್ದ ಅವರು ಜನ್ಮಾಂತರದ ವೈರಿಗಳಾಗಿ ಮಾರ್ಪಾಡು ಹೊಂದಿದ್ದು ಹೇಗೆ ? ಅ೦ದಿನ ಕ್ರೌರ್ಯವನ್ನು ಕಣ್ಣಾರೆ ಕಂಡ ಸಾಹಿತಿ-ಕವಿ- ಬುದ್ಧಿಜೀವಿಗಳು ಭಾರತವನ್ನು ರಕ್ತಸಿಕ್ತ ಹೋಳನ್ನಾಗಿ ಹಂಚಿಕೊಟ್ಟ ಬಗ್ಗೆ ಸಾಕಷ್ಟು ಸಾಹಿತ್ಯವನ್ನು ರಚಿಸಿದ್ದಾರೆ. ಎರಡೂ ದೇಶಗಳ ಜನರ ಮಾನಸಿಕ ನೋವನ್ನಲ್ಲಿ ಕಾಣಬಹುದು. ಅಂಥ ಕೆಲವು ಲೇಖನಗಳ ಸಂಗ್ರಹ ಇಲ್ಲಿದೆ.