ಹರಿಜನೋದ್ಧಾರವನ್ನು ಮೊದಲ ಬಾರಿಗೆ ಭಾರತದಲ್ಲಿ ಕೈಗೊಂಡವರ ಪೈಕಿ ಬಸವಣ್ಣನವರು ಮೊದಲಿಗೆ ನಿಲ್ಲುತ್ತಾರೆ. ಅಂದಿನಿಂದಲೇ ಹರಿಜನ ಕಡೆಗೆ ಕಳಕಳಿಯ ಮನಸ್ಸು ಇದ್ದಿದ್ದರೆ ಈ ಸಮಾಜದಲ್ಲಿ ಹರಿಜನೋದ್ಧಾರ ಎಂಬುದೇ ಅಗತ್ಯವಿರಲಿಲ್ಲ. ಮಹಾತ್ಮಗಾಂಧೀಜಿ ಸಹ ಮತ್ತೊಮ್ಮೆ ಚಳವಳಿ ನಡೆಸುವುದು ಬೇಕಿರಲಿಲ್ಲ. ಸಮಾಜದಲ್ಲಿಯ ಅಸ್ಪೃಶ್ಯತೆ ತೊಲಗಬೇಕಿದೆ. ಇಂತಹ ಚಿಂತನೆಯಲ್ಲಿ ಹರಳುಗಟ್ಟಿದ ಪ್ರಖರ ಲೇಖನವಿದು. ಖ್ಯಾತ ಜಾನಪದ ಸಾಹಿತಿ ಸಿಂಪಿಲಿಂಗಣ್ಣ ಅವರು ತಮ್ಮ ಬರೆಹದ ಮೂಲಕ ಸರ್ವ ಸಮಾನತೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...
READ MORE