ಹಿರಿಯ ಲೇಖಕ, ವಿದ್ವಾಂಸ ಡಾ. ಸಾ.ಕೃ. ರಾಮಚಂದ್ರರಾವ್ ಅವರು ಬರೆದ ಬರಹಗಳ ಕೃತಿ-ಗಣಪತಿಯ ಕಲ್ಪನೆ. ಲೇಖಕರು ಸ್ವತಃ ಮನೋವಿಜ್ಞಾನಿಯಾಗಿದ್ದು, ಗಣಪತಿ ದೇವರ ಕಲ್ಪನೆಯು ಜನಸಮೂಹದಲ್ಲಿ ಬೆಳೆದು ಬಂದ ರೀತಿ, ನಂಬಿಕೆಗಳ ವೈವಿಧ್ಯಮಯ ಪರಿಗಳು ಇತ್ಯಾದಿ ವಿಶ್ಲೇಷಿಸುವ ಬರಹಗಳು ಈ ಕೃತಿಯಲ್ಲಿ ಸಂಕಲನಗೊಂಡಿದ್ದು, ಚಿಂತನಾರ್ಹವಾಗಿವೆ.
ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...
READ MORE