‘ಎದೆಗೆ ಬಿದ್ದ ಗಾಂಧಿ !’ ಲೇಖಕ ರಘೋತ್ತಮ ಹೊ.ಬ ಅವರು ಅಂಬೇಡ್ಕರ್ ವಾದ ಮತ್ತು ಗಾಂಧಿ ವಾದದ ಭಿನ್ನತೆಗಳ ಕುರಿತು ಬರೆದಿರುವ ವೈಚಾರಿಕ ಬರಹಗಳ ಸಂಕಲನ. ಈ ಕೃತಿಯಲ್ಲಿ ಅಂಬೇಡ್ಕರ್ ಬರೆಹ, ಭಾಷಣಗಳನ್ನು ಆಧಾರವಾಗಿಟ್ಟುಕೊಂಡು ಗಾಂಧಿವಾದವನ್ನು ವಿಮರ್ಶೆ ಮಾಡಲಾಗಿದೆ. ಸ್ವಾಭಿಮಾನ ಕುರಿತು ಅಂಬೇಡ್ಕರರ ಆತ್ಮಕತೆಯ ಪುಟಗಳಿಂದ, ಗಾಂಧೀಜಿ ಅವರಿಂದ ಜಾತಿಪದ್ದತಿ ಸಮರ್ಥನೆ, ದರ್ಶನವಾಗದ ಗಾಂಧೀಜಿಯವರ ದಲಿತೋದ್ಧಾರದ ಮುಖ, ಹರಿಜನ ಎಂಬ ನಾಮಕರಣದ ಸುತ್ತ ಒಂದಷ್ಟು, ಜಾತೀಯತೆ ಎಂಬ ರೋಗದ ವಿನಾಶ, ಗಾಂಧೀಜಿಯವರ ದಲಿತೋದ್ಧಾರದ ಸಾಕ್ಷಿಗಳು, ಕಾಮಾಟಿಪುರ ದಲಿತ ಮಹಿಳೆಯರನ್ನುದ್ದೇಶಿಸಿ ಅಂಬೇಡ್ಕರ್, ಅಂಬೇಡ್ಕರ್ ಮತ್ತು ಹಿಂದೂ ದೇವರುಗಳು, ಆಧುನಿಕ ಮನು ಯಾರು, ಅಂಬೇಡ್ಕರ್ ಎಂಬ ನೈಜ ದೇಶಪ್ರೇಮಿ, ಅಂಬೇಡ್ಕರರನ್ನು ಆಧ್ಯಾತ್ಮಿಕ ನಾಯಕ ಎನ್ನುವವರನ್ನು ಕುರಿತು, ಅಂಬೇಡ್ಕರ್ ಹೇಳಿದ ಆರ್ಯರ ಸಂಸ್ಕೃತಿ, ಹಿಂದುತ್ವ ಸಮಾನತೆಯನ್ನು ಗುರುತಿಸುತ್ತದೆಯೇ, ದಲಿತರ ಕೇರಿಗಳ ರಾಮಭಜನೆ, ಸಂವಿಧಾನ ಸೂರ್ಯನಿಗೇ ಟಾರ್ಚು ಹಿಡಿಯುವವರ ಕುರಿತು, ಅಂಬೇಡ್ಕರ್ ನೀಡಿದ್ದ ಚುನಾವಣಾ ಪ್ರಣಾಳಿಕೆ, ಸಾಯಿ ಭಕ್ತರ ಕುರಿತು ಅಂಬೇಡ್ಕರ್ ಸೇರಿದಂತೆ 22 ವೈಚಾರಿಕ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ರಘೋತ್ತಮ ಹೊ.ಬ ಮೂಲತಃ ಚಾಮರಾಜನಗರ ಜಿಲ್ಲೆಯ ಮಂಗಲ ಹೊಸೂರಿನವರು. ಬಿಎಸ್ಸಿ, ಬಿಇಡಿ ಪದವಿಗಳನ್ನು ಪಡೆದಿರುವ ರಘೋತ್ತಮ ಹೊ.ಬ ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಆಂದೋಲನ ದಿನಪತ್ರಿಕೆಗಳು, ಸಂವಾದ, ಭೀಮವಾದ, ಪ್ರಬುದ್ಧಭಾರತ ಮಾಸ ಪತ್ರಿಕೆಗಳು, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅವರ ಹಲವು ಕೃತಿಗಳು ಪ್ರಕಟಗೊಂಡಿವೆ. ಗಾಂಧಿ ಹೊರಾಟ ಯಾರ ವಿರುದ್ಧ?, ಅಂಬೇಡ್ಕರ್ ಎಂಬ ಕರಗದ ಬಂಡೆ, ಎದೆಗೆ ಬಿದ್ದ ಗಾಂಧಿ, ಅಂಬೇಡ್ಕರ್ ದರ್ಶನಂ ಅವರ ಪ್ರಕಟಿತ ಕೃತಿಗಳು ...
READ MORE