‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಗೊತ್ತೇ ಇರದ ಅವೆಷ್ಟೋ ಸಂಗತಿಗಳು. ಡಾ. ಜಿ.ಬಿ. ಹರೀಶ ಅವರ ಪ್ರಮುಖ ಕೃತಿ. ಡಾ. ಭೀಮರಾವ್ ಅಂಬೇಡ್ಕರ್ ಖಂಡಿತವಾಗಿಯೂ ಯಾವುದೋ ಒಂದು ವರ್ಗಕ್ಕೆ ಸೇರಿದವರಲ್ಲ. ಅಂಬೇಡ್ಕರ್ ಈ ದೇಶದ ಆಸ್ತಿ. ಈ ದೇಶ ಕಂಡ ಅಪ್ರತಿಮ ಚಿಂತಕ ಆದರೆ ಕಾಲಾಂತರದಲ್ಲಿ ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತ ಮಾಡಿ ಅವರ ವ್ಯಕ್ತಿತ್ವವನ್ನು ಕುಬ್ಜವಾಗಿ ಮಾಡುವ ತಪ್ಪು ಕೆಲಸ ನಿರಂತರವಾಗಿ ನಡೆಯಿತು.
ಮುಖ್ಯವಾಗಿ ಅಂಬೇಡ್ಕರ್ ಓರ್ವ ರಾಷ್ಟ್ರವಾದಿಯಾಗಿದ್ದರು. ಅದೇ ಕಾರಣಕ್ಕೊಸ್ಕರವೇ ಅಥವಾ ರಾಷ್ಟ್ರೀಯ ಅಸ್ಮಿತೆಯನ್ನು ಕಾಯ್ದುಕೊಳ್ಳಲು ಈ ದೇಶದ ಸಂಸ್ಕೃತಿ ಸೊಗಡನ್ನು ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಬಲವಾಗಿ ಪ್ರತಿಪಾದನೆ ಮಾಡಿದ್ದರು. ಕಾರಣಾಂತರದಿಂದ ಈ ಸತ್ಯ ಹೊರಬರಗೊಡಲಿಲ್ಲ ಅದು ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಲ್ಲದೆ ಮತ್ತೇನು ಅಲ್ಲ. ಅಂಬೇಡ್ಕರ್ ಅವರು ಈ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಜ್ಞಾನ ಮಾತ್ರವಲ್ಲ. ಆ ನಿಟ್ಟಿನಲ್ಲಿ ಜಾಗತಿಕವಾಗಿ ತೌಲನಿಕ ಅಧ್ಯಯನ ಮಾಡಿ ತಿಳಿವಳಿಕೆ ಹೊಂದಿದ್ದರು. ಈ ಎಲ್ಲಾ ವಿಷಯಗಳ ಕುರಿತು ಕನ್ನಡದಲ್ಲಿ ಇದೇ ಮೊದಲಬಾರಿಗೆ ಪುಸ್ತಕವೊಂದನ್ನು ಡಾ. ಜಿ.ಬಿ. ಹರೀಶ್ ಅವರು ಹೊರತರುತ್ತಿದ್ದಾರೆ. ಎಲ್ಲರಿಗೂ ಬೇಕಾದ ಅಂಬೇಡ್ಕರ್ ಇದೊಂದು ಪುಸ್ತಕ ಎನ್ನುವುದಕ್ಕಿಂತ ಹೆಚ್ಚಾಗಿ ಇತಿಹಾಸ, ಸಂಸ್ಕೃತಿ ಆಸಕ್ತರ ಪಾಲಿಗೊಂದು ಸಂಗ್ರಾಹ್ಯ ಹೊತ್ತಿಗೆ ಆಗಲಿದ್ದಾರೆ ಎನ್ನುತ್ತಾರೆ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ.
©2024 Book Brahma Private Limited.