ಡಾ. ಬಿ.ಆರ್. ಅಂಬೇಡ್ಕರ್: ಜೀವಂತಿಕೆಯ ಸಾಕ್ಷಿ

Author : ಕೆ.ಪಿ. ಮಹಾಲಿಂಗು ಕಲ್ಕುಂದ

Pages 240

₹ 250.00




Year of Publication: 2018
Published by: ಚಳವಳಿ ಪ್ರಕಾಶನ
Address: ಬೆಂಗಳೂರು

Synopsys

ಚಿಂತಕ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ಬರೆದ ಕೃತಿ-ಡಾ. ಬಿ.ಆರ್. ಅಂಬೇಡ್ಕರ್: ಜೀವಂತಿಕೆಯ ಸಾಕ್ಷಿ. ಡಾ. ಅಂಬೇಡ್ಕರ್ ಅವರ ವೈಚಾರಿಕ ಗಟ್ಟಿತನ, ದೇಶಪ್ರೇಮದ ಅಭಿಮಾನ, ಮಾನವೀಯತೆಯ ಸಂಕೇತವಾಗಿರುವ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ಇದು. ಅಂಬೇಡ್ಕರ್ ಕುರಿತ ಅವರ ಅಧ್ಯಯನದ ಆಳವನ್ನು ಬಿಂಬಿಸುವ ಈ ಕೃತಿಯು ಅಂಬೇಡ್ಕರರ ವೈವಿಧ್ಯಮಯ ಆಯಾಮಗಳನ್ನು ಪರಿಚಯಿಸುತ್ತದೆ.

About the Author

ಕೆ.ಪಿ. ಮಹಾಲಿಂಗು ಕಲ್ಕುಂದ

ಲೇಖಕ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ಮೂಲತಃ ಮೈಸೂರಿನ ನಂಜನಗೂಡು ತಾಲ್ಲೂಕಿನ ಕಲ್ಕುಂದ ಗ್ರಾಮದವರು. ಚಳವಳಿಯ ಹಿನ್ನೆಲೆಯಿಂದ ಬಂದ ಇವರು ರಾಗ-ದ್ವೇಷದ ನೆಲೆಗಟ್ಟಿನಿಂದ ಮೇಲೆದ್ದು, ಬುದ್ಧಿಯ ಚುರುಕಿನಿಂದ ವಿವೇಕದ ಹಾದಿಯಲ್ಲಿ ನಡೆದವರು. ದಸಂಸ ನಾಯಕತ್ವ ವಹಿಸಿಕೊಂಡು ಅಸತ್ಯತೆಯನ್ನು ಹರಿತ ನಾಲಿಗೆಯಿಂದ ಖಂಡಿಸಿದ ವ್ಯಕ್ತಿ. ಇವರ ಸಂಶೋಧನಾ ವಿಷಯವೂ ಕೂಡ ಚಳವಳಿ ಕುರಿತಾದ ಅಧ್ಯಯನವೇ. ಇವರ ನಾರಾಯಣ ಗುರುಗಳ ವೈಚಾರಿಕತೆ ಕುರಿತ “ಒಂದೇ ಜಾತಿ-ಒಂದೇ ಧರ್ಮ-ಒಂದೇ ದೇವರು” ಎಂಬ ಕೃತಿಯು ನಾರಾಯಣ ಗುರುಗಳ ಆಧ್ಯಾತ್ಮಿಕ ಚಿಂತನೆಗಳನ್ನು ಸಮರ್ಪಕವಾಗಿ ಬಿಂಬಿಸುತ್ತದೆ. ...

READ MORE

Related Books