ಧರ್ಮ ರಾಜಕಾರಣ ಕೃತಿ ಏಕ ಕಾಲದಲ್ಲಿ ಭೂತ, ಪುರಾಣ ಸಂದರ್ಭದ ಸಾಂಸ್ಕೃತಿಕ ದಬ್ಬಾಳಿಕೆಗಳನ್ನು ಗುರುತಿಸುತ್ತಲೇ ಸದ್ಯದ ರಾಜಕಾರಣದ ನೆಲೆಗಳನ್ನು ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಪರಿಶೋಧಿಸುವ ಯತ್ನ ಈ ಕೃತಿಯ ವಿಶಿಷ್ಟತೆಯಾಗಿದೆ. ಧರ್ಮ ಮತ್ತು ರಾಜಕಾರಣಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದು, ವರ್ತಮಾನದಲ್ಲಿ ಭಯೋತ್ಪಾದನೆ ಧಾರ್ಮಿಕ ಮೂಲಭೂತವಾದ, ಭಾಷಿಕ ಫ್ಯಾಸಿಸಂ ಮುಂತಾದ ಗಂಡಾಂತರಕಾರಿ ನಿಲುವುಗಳನ್ನು ತನ್ನ ಒಡಲೊಳಗೆ ಇರಿಸಿಕೊಂಡು ವಿಛ್ಛಿದ್ರಕಾರಿ ಕೃತ್ಯಗಳನ್ನು ಹೊರಹಾಕುತ್ತಿದೆ. ಇಂಥವುಗಳಿಂದ ಹೇಗೆ ಬಿಡುಗಡೆ ಪಡೆಯಬೇಕು ಎಂಬುದರರ ಪರ್ಯಾಯ ದಾರಿ ಈ ಕೃತಿ ಓದಿದಾಗ ದೊರಕುತ್ತದೆ ಎನ್ನುತ್ತಾರೆ ಶ್ರೀನಿವಾಸ ಎನ್. ಕಲ್ಲೂರು.
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...
READ MORE