ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಬರೆದ ಕೃತಿ ದೇಸಿ ಜೀವನ ಪದ್ಧತಿ. ಬದಲಾವಣೆಗಳನ್ನು ನಾವು ಸ್ವೀಕರಿಸಲೇ ಬೇಕು. ಆದರೆ, ದೇಸಿ ಪದ್ಧತಿಯು ಆರೋಗ್ಯಕರವಾಗಿದ್ದು, ಮೂಲ ಪ್ರಕೃತಿಗೆ ಅನುಗುಣವಾಗಿದೆ. ಬದಲಾವಣೆ ನೆಪದಲ್ಲಿ ಏನೆಲೆವನ್ನು ಒಪ್ಪಿಕೊಳ್ಳಲು ಅಸಾಧ್ಯ. ಇಂತಹ ಚಿಂತನೆಗಳ ಮೂಲಕ ಈ ಕೃತಿಯು ಗಂಭೀರ ಚರ್ಚೆಯನ್ನು ಪ್ರೇರೇಪಿಸುತ್ತದೆ.
ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...
READ MORE