ದೇಸಿ ದಿಬ್ಬಣ- ಹಿರಿಯ ಚಿಂತಕರು, ಸಾಹಿತಿಗಳಾದ ಪ್ರೊ.ಶಿವರಾಮಯ್ಯನರ ಇಪ್ಪತ್ತೆಂಟು ಲೇಖನಗಳ ಸಂಕಲನ. ಯುವ ಜನಾಂಗಕ್ಕೆ ಸ್ಫೂರ್ತಿದಾಯಕ ಹಾಗೂ ಆರೋಗ್ಯಕರ ನಿಲುವುಗಳನ್ನು ಸದ್ದಿಲ್ಲದೇ ತಮ್ಮ ಸಾಹಿತ್ಯ ಕೃಷಿಯ ಮೂಲಕ ನೀಡಿರುವ ಪ್ರೊ. ಶಿವರಾಮಯ್ಯನವರ ಚಿಂತನ ಬರಹಗಳನ್ನು ಸಂಪಾದಿಸಿ ಪ್ರಕಟ ಮಾಡಿದವರು ಡಾ. ಕೆ.ಎಲ್. ದಿವ್ಯ. ಪ್ರಸ್ತುತ ಸಮಾಜವನ್ನು ಅತೀ ಸೂಕ್ಷ್ಮವಾಗಿ ಗಮನಿಸಿ, ಆರೋಗ್ಯಪೂರ್ಣ ವಿಚಾರಧಾರೆಗಳನ್ನು ಕೃತಿಯಲ್ಲಿ ಕಾಣಬಹುದು. ನೆಲಮೂಲ ಸಂಸ್ಕೃತಿಯ ಚಿಂತನೆ, ಆಚರಣೆ, ಮತ್ತು ಪ್ರಮುಖ ವ್ಯಕ್ತಿಗಳ ವಿಚಾರ ವಿಮರ್ಶೆಯನ್ನು ಇದು ಒಳಗೊಂಡಿದೆ.
ಕನ್ನಡ ಸಾಹಿತ್ಯದ ಅನೇಕ ಆಯಾಮಗಳನ್ನು ಅಧ್ಯಯನ ಮಾಡಿ ರಾಮಾಯಣ,ಕುವೆಂಪು ಗದ್ಯ ಸಾಹಿತ್ಯ, ಪಾಕಿಸ್ತಾನದ ಪುರುಷ ರಾಜಕಾರಣ, ಪ್ರಗತಿಪರ ಮಹಾರಾಜರ ನಿಲುವು, ಪ್ರಬುದ್ಧ ಚಿಂತನೆಯಲ್ಲಿರುವ ರಾಜಕೀಯ ಒಳನೋಟಗಳು, ಕೆ.ಎಸ್. ಭಗವಾನರ ಕುವೆಂಪುಯುಗದ ಒಳನೋಟ, ಮನುಷ್ಯಕುಲದ ಕುರಿತಾದ ಹಮ್ಮು ಬಿಮ್ಮುಗಳ ಚರ್ಚೆ, ಸಾಹಿತ್ಯ ಸಮ್ಮೇಳನದ ಮಾತುಕತೆ, ಒಂದಿಷ್ಟು ಅನುಭವ, ಇವೆಲ್ಲವನ್ನೂ ಒಳಗೊಂಡಂತಹ ಅಪರೂಪದ ಚಿಂತನೆಗಳನ್ನು ಗ್ರಂಥದಲ್ಲಿ ಕಾಣಬಹುದು.