ಚಿಂತನೆಗಳು ಅಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದವುಗಳು. ಬಸವಣ್ಣನವರ ವಚನದ ಸಾಲಿನ್ನೇ ಪುಸ್ತಕಕ್ಕೆ ಶೀರ್ಷಿಕೆಯಾಗಿರಿಸಿದೆ. ದೇಹವೇ ಎನ್ನುವುದನ್ನು ದೀರ್ಘಗೊಳಿಸದೇ ದೇಹವೆ ಎಂದಿರುವುದು ಬೇಸರವನ್ನುಂಟು ಮಾಡಿತು. ಬಹಳಷ್ಟು ಲೇಖನಗಳು ರಾಜ್ಯದ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಆಕಾಶವಾಣಿಯಲ್ಲಿಯೂ ಪ್ರಸಾರಗೊಂಡಿವೆ. ತುಂಬಾ ಕ್ಲಿಷ್ಟವಾದ ಅಧ್ಯಾತ್ಮವನ್ನು ಸರಳವಾಗಿ ಹೇಳಲಾಗಿದೆ. ಓದುಗರ ಚಿಂತನ ಸಾಮರ್ಥ್ಯಕ್ಕೆ ಪೂರಕವಾಗಿರುವ ೩೦ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಈ ಕೃತಿ ಹೊಂದಿದೆ. ಚಿಂತನಾತ್ಮರಿಗೆ ಇದೊಂದು ಒಳ್ಳೆಯ ಕೃತಿ ಎಂದು ಎಸ್.ರಾಜಾರಾಂ ಪುಸ್ತಕಲೋಕದಲ್ಲಿ ಅಭಿಪ್ರಾಯಪಟ್ಟಿದ್ದರು.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE