ಡಾ. ವಿ.ಮುನಿವೆಂಕಟಪ್ಪ ಅವರ ಕೃತಿ-ದಲಿತ ಸಾಮಾಜಿಕ ದರ್ಶನ. ದಲಿತರಿಗೆ ವ್ಯಕ್ತಿಗತವಾಗಿಯೂ, ಸಾಮಾಜಿಕವಾಗಿಯೂ ಅಸ್ತಿತ್ವ ಇಲ್ಲ ಎನ್ನುವಂತಹ ಸಾಮಾಜಿಕ ಸ್ಥಿತಿಗತಿಗಳಿದ್ದವು. ಆದರೆ, ಬುದ್ಧ-ಬಸವ-ಅಂಬೇಡ್ಕರ್ ಅವರ ಚಿಂತನಾಭರಿತ ಹೋರಾಟದ ಫಲವಾಗಿ ದಲಿತರಿಗೆ ವಿಶೇಷ ಅಸ್ತಿತ್ವ ಮಾತ್ರವಲ್ಲ; ಈ ಸಮೂಹವು ಸಾಂಸ್ಕೃತಿಕವಾಗಿಯೂ ಸಿರಿವಂತಿಕೆ ಪಡೆದಿದೆ ಎಂಬ ಸತ್ಯ ಅರಿವಾಯಿತು. ದಲಿತರಲ್ಲಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಿರಿವಂತಿಕತೆಯನ್ನು ನೆನಪಿಸುವ ಕೃತಿ ಇದು. ಕೃತಿಗೆ ಸಾಹಿತಿ ಡಾ. ಆರ್. ಕಾವಲ್ಲಮ್ಮ ಮುನ್ನುಡಿ ಬರೆದು ದಲಿತರ ಸಾಮಾಜಿಕ ಜೀವನವನ್ನು ಕಟ್ಟಿಕೊಡುವ ಲೇಖನಗಳಿದ್ದು ಸಂಶೋಧನೆಗೆ ಉತ್ತಮ ಆಕರ ಕೃತಿ ಇದು ಎಂದು ಪ್ರಶಂಸಿಸಿದ್ದಾರೆ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE