ಡಾ. ವಿ.ಮುನಿವೆಂಕಪಟ್ಟ ಅವರ ಕೃತಿ-ದಲಿತ ಚಳವಳಿ ಚರಿತ್ರೆ-9. ಸ್ವತಃ ಲೇಖಕರು ಚಳವಳಿಯಲ್ಲಿ ಪಾಲ್ಗೊಂಡಿದ್ದರಿಂದ ಕರ್ನಾಟಕದಲ್ಲಿಯ ದಲಿತ ಚಳವಳಿಯ ಏಳು-ಬೀಳುಗಳೊಂದಿಗೆ ಅದರ ಸ್ವರೂಪವನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದಾರೆ. 1970ರಿಂದ ಕರ್ನಾಟಕದಲ್ಲಿ ದಲಿತ ಚಳವಳಿ ಆರಂಭವಾಯಿತು. ಕನಿಷ್ಟ 10 ಕಾಲ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ನಂತರದ ದಿನಗಳಲ್ಲಿ ನಾಯಕತ್ವದ ಅಭಾವದಿಂದ ಅದು ತನ್ನ ಪ್ರಭಾವ ತಗ್ಗಿಸಿಕೊಳ್ಳುತ್ತಾ ಬಂದಿತು. ಇಂತಹ ವಿದ್ಯಮಾನಾಗಳ ಕುರಿತು ನಾಡಿನ ವಿವಿಧೆಡೆಯಿಂದ ಬಂದ ಲೇಖನಗಳ ಸಂಗ್ರಹಿಸಿದ್ದರ ಫಲವೇ ಈ ಕೃತಿ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE