ದಲಿತ ಚಳವಳಿ ಚರಿತ್ರೆ ಸಂಪುಟ-5

Author : ವಿ. ಮುನಿವೆಂಕಟಪ್ಪ

Pages 496

₹ 496.00




Year of Publication: 2013
Published by: ಎಸ್.ಎಂ. ಎಸ್. ಪಬ್ಲಿಕೇಷನ್ಸ್
Address: # 61, 6ನೇ ಅಡ್ಡರಸ್ತೆ, ಹೆಬ್ಬಾಳ ಮುಖ್ಯ ರಸ್ತೆ, ಕಾವೇರಿ ಗ್ರಾಮೀಣ ಬ್ಯಾಂಕ್ ಸಮೀಪ, ಮಂಚೇಗೌಡನಕೊಪ್ಪಲು. ಮೈಸೂರು-570017

Synopsys

ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-5. ಕರ್ನಾಟಕದಲ್ಲಿ (1970) ದಲಿತ ಚಳವಳಿ ಆರಂಭವಾಗಿದ್ದು, ಸುಮಾರು 10 ವರ್ಷ ಕಾಲ ಅದು ತನ್ನ ಉದ್ದೇಶ ಸಾಧನೆಗೆ ಬದ್ಧವಾಗಿತ್ತು ಮತ್ತು ಗುರಿ ಸಾಧಿಸಿ ಯಶಸ್ವಿಯಾಯಿತು. ಆದರೆ, ಮುಂದೆ, ಸೂಕ್ತ ನಾಯಕತ್ವದ ಅಭಾವದ ಪರಿಣಾಮ ಚಳವಳಿಯ ಕಾವು ಕಡಿಮೆಯಾಯಿತು. ಈ ಕುರಿತು ನಾಡಿನ ವಿವಿಧೆಡೆಯಿಂದ ಬಂದ ಲೇಖನಗಳ ಸಂಗ್ರಹವೇ ಈ ಕೃತಿ. ಸಾಹಿತಿ ನಾ. ದಿವಾಕರ ಮುನ್ನುಡಿ ಬರೆದು ದಲಿತ ಸಾಹಿತ್ಯ, ದಲಿತ ಚಳವಳಿಯನ್ನು ಎಲ್ಲ ಮಗ್ಗಲುಗಳನ್ನು ದಾಖಲಿಸುವಲ್ಲಿ ಸಂಪಾಕದರ ಕಳಕಳಿಯನ್ನು ಪ್ರಶಂಸಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books