ಪ್ರೊ. ಆರ್.ಕೆ. ಹುಡಗಿ ಅವರು ‘ರಾಹು’ ಎಂದೇ ಖ್ಯಾತಿ. ಅವರ ಅನುವಾದಿತ ’ಕಾರ್ಪೋರೇಟ್ ಕಾಲದಲ್ಲಿ ಕಾರ್ಲ್ ಮಾರ್ಕ್ಸ್’ ಕೃತಿಯು ಹತ್ತು ಅಧ್ಯಾಯಗಳನ್ನು ಒಳಗೊಂಡಿವೆ. ಅವುಗಳಲ್ಲಿ ಇಂದು ಮಾರ್ಕ್ಸ್ವಾದ ವಿರುದ್ಧ ಹಾಗೂ ಮಾರ್ಕ್ಸ್ ಇನ್ನು ಮುಂದೆ ನಿರುಪಯುಕ್ತ ಎಂದು ವಾದಿಸುವ ಹತ್ತು ಮುಖ್ಯ ವಿಮರ್ಶಾತ್ಮಕ ಆಕ್ಷೇಪಗಳನ್ನು ಸಂಗ್ರಹಿಸಿ, ಅವುಗಳಿಗೆ ಉತ್ತರಿಸುವ ರೂಪದಲ್ಲಿ ಪುಸ್ತಕವನ್ನು ರಚಿಸಲಾಗಿದೆ. ಟೆರಿ ಈಗಲ್ ಟನ್ ಅವರ ಉತ್ತರಗಳಲ್ಲಿ ಅವರ ವ್ಯಾಖ್ಯಾನ, ಸಮರ್ಥ ಪಾಂಡಿತ್ಯ, ಆಧುನಿಕ ಕಾಲದ ಅಮೂಲಾಗ್ರ ತಿಳಿವಳಿಕೆ, ವಿಮರ್ಶಾತ್ಮಕ ಒಳನೋಟ, ಸರಳವಾಗಿದೆ. ಅಲ್ಲಲ್ಲಿ ಹಾಸ್ಯ ಮಿಶ್ರಿತ ವ್ಯಂಗ್ಯ ಮತ್ತು ಶಕ್ತಿಯುತ ಸಂವಹನ ಶಕ್ತಿಯೊಂದು ಕೂಡಿದೆ. ಈ ಕೃತಿ ಕೇವಲ ವಿಮರ್ಶಕರು, ಪಂಡಿತರು ಮಾತ್ರ ಓದಬಹುದಾದ ಪುಸ್ತಕ ಅನಿಸುವುದಿಲ್ಲ. ಸಾಮಾನ್ಯ ಓದುಗರೂ ಈ ಕೃತಿಯಲ್ಲಿ ಪರಿಸರ, ಆಧುನಿಕತೆ ಮುಂತಾದ ವಿಚಾರಗಳನ್ನು ಚರ್ಚಿಸುವಾಗ, ತನ್ಮಯರಾಗಿ ತಮ್ಮದೇ ಅನುಭವಗಳ ವಿಸ್ತಾರವೆಂಬಂತೆ ಓದಿಕೊಳ್ಳಬಹುದು.
ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು . ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...
READ MORE