ಚಂಪಾ ಸಾಹಿತ್ಯ ಗೋ-ಕಾಕ್ ಗೋ- ಬ್ಯಾಕ್

Author : ಚಂದ್ರಶೇಖರ ಪಾಟೀಲ (ಚಂಪಾ)

Pages 42

₹ 50.00




Year of Publication: 2013
Published by: ಸಂಕ್ರಮಣ ಪ್ರಕಾಶನ
Address: #15, ಜ್ಯೋತಿ ಲೇಔಟ್ ಯಲಚೇನಹಳ್ಳಿ, ಜೆ.ಪಿ ನಗರ, ಬೆಂಗಳೂರು-560078
Phone: 9449069344

Synopsys

‘ಚಂಪಾ ಸಾಹಿತ್ಯ ಗೋ-ಕಾಕ್ ಗೋ- ಬ್ಯಾಕ್ ’ ಕೃತಿಯು ಚಂದ್ರಶೇಖರ ಪಾಟೀಲರ ಗೋಕಾಕ್ ಚಳವಳಿಯ ಕುರಿತ ಬರಹಗಳ ಸಂಕಲನವಾಗಿದೆ. ಲಂಕೇಶ್ ಪತ್ರಿಕೆಯಿಂದ ಆಯ್ದುಕೊಂಡಂತಹ ವಿ. ಕೃ ಗೋಕಾಕ್ ಅವರು ಗೋಕಾಕ್ ಚಳವಳಿ ಮುಗಿದೊಡನೆ ಶಿಷ್ಯನಿಗೆ ಬರೆದ ‘ಚಂಪಾ ಅವರಿಗೆ ಗುರುವಿನ ಪತ್ರ’ ದ ಚಿತ್ರಣ ಇಲ್ಲಿ ಕಾಣಬಹುದು. ಹನ್ನೊಂದು ಅಧ್ಯಾಯಗಳಿರುವ ಈ ಕೃತಿಯು ನನ್ನ ಮಾತು, ಕನ್ನಡ ಕನ್ನಡ ಬರ್‍ರಿ ನಮ್ಮ ಸಂಗಡ, ಗೋಕಾಕ ಚಳುವಳಿಯ ಹಾಡು, ಗೋ-ಕಾಕ್ ಗೋ-ಬ್ಯಾಕ್, ಗೋಕಾಕ ಚಳುವಳಿ : ಒಂದು ಅವಲೋಕನ, ಕನ್ನಡ ಚಳುವಳಿಯ ಸ್ವರೂಪ, ‘ಜನಪರ’ ಚಳುವಳಿ : ಆವರಣ ಮತ್ತು ಹೂರಣ, ಜನಪರ ಆಂದೋಲನ -ಜನಾಂದೋಲನ, ಎರಡು ಹಾಡು : ನಮ್ಮ ಪಾಡು, ಸತ್ಯಾಗ್ರಹ ನಮ್ಮ ಸತ್ಯಾಗ್ರಹ ನಮ್ಮ ಸತ್ಯಾಗ್ರಹ : ಚೆನ್ನವೀರ ಕಣವಿ, ಬಂತೋ ಬಂತು ಕನ್ನಡ ದಂಡು : ವಿಜಯ ಪಾಟೀಲ, ಸಂಕ್ರಮಣ ಪ್ರಕಾಶನದ ಪ್ರಕಟಣೆಗಳು, ಚಂಪಾ ವಿವರಗಳನ್ನು ಒಳಗೊಂಡಿದೆ.

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books