ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧನ ದರ್ಶಿಸಬೇಕೆ? ಧರ್ಮವ ದರ್ಶಿಸಿ....! ಜಗತ್ತಿನ ಸರ್ವ ಶ್ರೇಷ್ಠ ಅಮರ ಜಾತಕ ಕಥೆಗಳ ಉದ್ದೇಶ ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಿಸಲಾಗಿದೆ. ಬುದ್ಧನನ್ನು ದರ್ಶಿಸಬೇಕಾದರೆ ಬೌದ್ಧ ಧರ್ಮವನ್ನು ಅನುಸರಿಸು ಎಂಬ ಸಂದೇಶದ ಬರೆಹಗಳು ಇಲ್ಲಿವೆ. ಈ ಸಂಪುಟವು ಒಟ್ಟು 27 ಕತೆಗಳನ್ನು ಒಳಗೊಂಡಿದೆ. ಸಿ.ಎಚ್. ರಾಜಶೇಖರ ಅವರು ಇಲ್ಲಿ ಹೇಳುವಂತೆ, ಪಟ್ಟಭದ್ರಹಿತಾಸಕ್ತ ವರ್ಗವು ಬುದ್ಧನ ಸಾಹಿತ್ಯದ ಬಗ್ಗೆ ಮುಗ್ಧರು ಹಾಗೂ ಜನಸಾಮಾನ್ಯರಲ್ಲಿ ತಪ್ಪು ಅರ್ಥ ಮತ್ತು ಭಾವನೆಗಳನ್ನು ಬತ್ತಿ ಬೆಳೆಯುತ್ತಿದ್ದು, ಈ ಅನರ್ಥದ ಮೇಲೆ ಬೆಳಕು ಚೆಲ್ಲುವಂತಹ ‘ಜಾತಕ ಕಥೆಗಳು ಯಶಸ್ಸಿನ ಮಾರ್ಗ’ ಮತ್ತು ’ಬುದ್ಧನತ್ತ ನನ್ನ ದೀರ್ಘ ಪಯಣ ಎಂಬ ಎರಡು ಪ್ರವೇಶ ಹಾಗೂ ಸುದೀರ್ಘ ಪೀಠಿಕೆಗಳು ಇಲ್ಲಿವೆ ಎಂದಿದ್ದಾರೆ. ಗೌತಮ ಬುದ್ಧರ ಬದುಕು ಮತ್ತು ಬೋಧನೆಗಳನ್ನು ಒಳಗೊಂಡಿದೆ. ಇಲ್ಲಿನ ಮೂಲಭೂತ ಪ್ರಶ್ನೆ ಎಂದರೆ, ನಾವೇಕೆ ಒಳ್ಳೆಯವರಾಗಬೇಕು ಎಂಬುದೇ ಆಗಿದೆ. ಇದಕ್ಕೆ ಪ್ರತಿ ಉತ್ತರವಾಗಿ ಇಲ್ಲಿನ ಒಂದೊಂದು ಕಥಾರತ್ನಗಳು ಸ್ವಯಂ ನಮ್ಮನ್ನು ನಾವೇ ಹೇಗೆ ಉನ್ನತವಾದ ಮಟ್ಟಕ್ಕೆ ಏರಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸುತ್ತದವೆ. ಹಾಗಾಗಿ ಇವುಗಳು ನಮ್ಮ ತಪ್ಪು, ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕುಬ್ಜತೆಯನ್ನು ಮನದಟ್ಟು ಮಾಡಿಕೊಡುವುದರ ಜೊತೆಗೆ ಮಾನಸಿಕ ಪರಿಶುದ್ಧತೆ, ಪರಿವರ್ತನೆ ಮತ್ತು ಪರಿಪೂರ್ಣತೆಯತ್ತ ನಮ್ಮನ್ನು ಮುನ್ನಡೆಸುವ ಮಹಾಮಾರ್ಗವಾಗಿದೆ. ಇಲ್ಲಿನ ಪ್ರತಿ ಕಥೆಯೂ ಮೈತ್ರಿಯಿಂದ ಕೂಡಿ ಬಾಳಿದರೆ ಫಲವನ್ನು ಪಡೆಯಬಹುದು ಎನ್ನುವುದನ್ನು ತಿಳಿಸುತ್ತದೆ.
©2024 Book Brahma Private Limited.