ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧ ನಿನಗೆ ನೀನೆ...!. ಬುದ್ಧನ ಚಿಂತನೆಗಳ ಹಿನ್ನೆಲೆಯಲ್ಲಿ ನಡೆಸಿದ ಜಿಜ್ಞಾಸೆಗಳ ಬರೆಹಗಳು ಇಲ್ಲಿವೆ. ಇಡೀ ವಿಶ್ವಕ್ಕೆ ಅನ್ವಯವಾಗುವ ಬುದ್ಧನ ಚಿಂತನೆಗಳು, ಜೀವನ ಸಂದೇಶಗಳು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ, ಮಾನವೀಯತೆಯೇ ಉಸಿರಾಗುವಲ್ಲಿ ನೆರವಾಗುತ್ತವೆ. ಜಾತಿ-ಧರ್ಮ-ವರ್ಣಭೇದ ಇತ್ಯಾದಿ ಅಮಾನವೀಯ ರೋಗಗ್ರಸ್ತ ಪರಿಸರದಿಂದ ಮುಕ್ತವಾಗಿಸುತ್ತವೆ. ಹೀಗಾಗಿ, ಬುದ್ಧ ನಿನಗೆ ನೀನೆ ಸಾಟಿ ಎನ್ನುವ ಅರ್ಥದಲ್ಲಿ ಇಲ್ಲಿಯ ವಿಚಾರಗಳು ಸಂಕಲನಗೊಂಡ ಕೃತಿ ಇದಾಗಿದೆ. ಈ ಕಥಾ ಸಂಪುಟವು ಒಟ್ಟು 60 ಶ್ರೇಷ್ಠ ಕಥೆಗಳನ್ನು ಒಳಗೊಂಡಿದೆ. ನಕ್ಷತ್ರದಿಂದೇನು ಪ್ರಯೋಜನ ಹೆದ್ದೇ ನಕ್ಷತ್ರದಲ್ಲವೆ, ಹರಕೆ ಎಂದರೆ ಹೇಗಿರಬೇಕು, ಬುದ್ಧ ಹೀಗಾದರು ಧರ್ಮ ಪ್ರಜಾಪ್ರಭುತ್ವದ ಗುರು, ಧರ್ಮ ತನಗೆ ತಾನೇ ಉತ್ತರಾಧಿಕಾರಿ ಏಕೆಂದ ಬುದ್ಧ, ದಾನಿಯನ್ನೇಕೆ ಧರ್ಮವು ಎಂದಿಗೂ ಕಾಪಾಡುವುದು, ಕಾಮತೃಷ್ಣಗೆ ಮಿಗಿಲು ಬಂಧನವಿಲ್ಲ ಅಂತು ಮುನ್ನಡೆ, ಜಗಳವಾಡುವವರೇಕೆ ಕ್ಷೇಮದಿಂದ ಇರುವುದಿಲ್ಲ, ಮಮತೆ ಇರದ ಮಾತೇ ಸೋಲು, ಆ ಕುದುರೆ ಹೀಗಿತ್ತು, ರಾಜ ನ್ಯಾಯವೆಂದರೆ ತುಲಾಭಾರದಂತಿರಬೇಕು, ಕುರಿಯೇ ನೀನೇಕೆ ನಕ್ಕೆ ನೀನೇಕೆ ಅತ್ತೆ, ವಿವೇಕದಿಂದಲೇ ಮಂಗಳವೆಂದ ಬುದ್ಧ, ನಿನ್ನಿಂದ ನೀ ಪಾಪಿಯಾಗದೆ ಪುಣ್ಯವಂತನಾಗೆಂದ ಬುದ್ಧ, ರಾಜ ಭ್ರಷ್ಟನಾದರೆ ಕಪ್ಪೆಗೂ ಕಷ್ಟವೆಂದ, ಧರ್ಮಯಜ್ಞ ಎಂದರೆ ಏನು?, ಪ್ರೀತಿ ಏಕ ಕಾಯ್ದಿಟ್ಟ ಖಾಸಗಿ, ಬುದ್ಧ ಶೀಲವೇ ಮೊದಲೆಂದ, ಕಸದಿಂದ ರಸ ತೆಗೆದವನ ಮಹಾಕಥೆ, ರಾಜ ದೇವಧರ್ಮವ ಬಲ್ಲೆಯಾ, ಆತ ಧರ್ಮದಿಂದ ದಡ ಸೇರಿದ, ಆ ಗರಿಕೆ ಹುಲ್ಲು ನಸುನಕ್ಕು ಧನ್ಯವಾಯ, ಹೋಗಿ ಬಾ ರಟ್ಠಪಾಲ ನೀ ಮುಕ್ತನೆಂದ ಬಎದ್ಧ, ಬಾ ಸೋಪಕ ನನ್ನ ತೊಡೆ ನಿನಗಾಗೆಂದ ಬುದ್ಧ ಪಸೇಜಿತ ಮನದ ಕರೆಗೆ ಓಗೊಡೆಂದ ಬುದ್ಧ, ಅತಿಯಾದೊಡೆಲ್ಲವೂ ಮಿತಿಮೀರುವುದು, ಬುದ್ಧರ ಪ್ರಥಮ ಉಪದೇಶ, ನಿನ್ನರ್ಧ ರಾಜ್ಯಕ್ಕೂ ಮಿಗಿಲು ಅರಿವೆಂದ ಸಿದ್ಧಾರ್ಥ , ಚೆನ್ನ ದುಃಖಿಸದಿರು ಅಗಲಿಕೆಯೇ ಸತ್ಯವೆಂದ ಸಿದ್ಧಾರ್ಥ, ಮರಳಿ ಜೀವ ಕೊಡುವುದಾದೊಡೆ ಕೊಲ್ಲು, ಹಸಿದವಗೆ ಅನ್ನ ಮೊದಲು ಧರ್ಮ ನಂತರ, ಏಕಾಂಗಿಯಾದರೂ ಸತ್ಯಕ್ಕೆ ಕೈ ಎತ್ತಿ, ಎಲ್ಲಕ್ಕೂ ಮನಸ್ಸೇ ಮೂಲ ಮನಸ್ಸೇ ಮಾರ್ಗದಾತ, ಕೇಳಿರೆಲ್ಲ ಜ್ಞಾನಕ್ಕಿಂತ ಶೀಲವೇ ಮಿಗಿಲು, ಕರುಣೆಯೇ ಧರ್ಮದ ಆಧಾರಸ್ತಂಭ, ಇವೆಲ್ಲವೂ ಇಲ್ಲಿನ ಕಥಾವಸ್ತುಗಳಾಗಿವೆ.
©2024 Book Brahma Private Limited.