ಲೇಖಕ ಸಿ.ಎಚ್ಬು. ರಾಜಶೇಖರ ಅವರು ಬರೆದ ಕೃತಿ-ಬುದ್ಧ ಬದುಕು ನಿಜಸ್ವರೂಪದಲ್ಲಿ ಅರಿತವನೇ ಗೆಲ್ಲುವ ನಿರತ....! ಬುದ್ಧನ ಚಿಂತನೆಗಳಲ್ಲಿ ರೂಪುಗೊಂಡ ವೈಚಾರಿಕ ಬರೆಹಗಳ ಸಂಕಲನವಿದು. ವಿಷಯವಸ್ತು, ನಿರೂಪಣಾ ಶೈಲಿ, ಮಂಡನೆಯ ರೀತಿ -ಈ ಎಲ್ಲವೂ ಓದುಗರ ಗಮನ ಸೆಳೆಯುತ್ತವೆ. ಈ ಕೃತಿಯು ಹನ್ನೊಂದು ಶೀರ್ಷಿಕೆಗಳನ್ನು ಒಳಗೊಂಒಡಿದ್ದು, ಶ್ರಮಣನಾಗುವುದೆಂದರೆ ಚೀವರವ ಹೊದೆಯುವುದಷ್ಟೇ ಅಲ್ಲ, ತಲ್ಲಣವು ತರವಲ್ಲ ಬ್ರಹ್ಮಜಾಲದ ಭೇದಿಸೆಂದ ಬುದ್ಧ, ಬಾಯಲಿಲ್ಲ ಬ್ರಹ್ಮ ವಿಕಾಸದ ಅವಲಂಬನೆಯಲ್ಲೆಂದ ಬುದ್ಧ, ಬದುಕ ನಿಜಸ್ವರೂಪದಲ್ಲಿ ಅರಿತವನೇ ಗೆಲ್ಲುವ ನಿರತ., ಬ್ರಹ್ಮ ಮಾರರ ಅಜ್ಞಾನ ನೀಗಿದನು ಬುದ್ಧ, ಎಲ್ಲಿಯೂ ನಿಲ್ಲದಿರಿ ಮುನ್ನಡೆದು ಹೀಗೆ ಅರಹಂತರಾಗಿ, ಹೀಗೆ ಬಾಳಿ ಬಯಸಿದ್ದಲ್ಲಿ ಮತ್ತೆ ಹುಟ್ಟಿರೆಂದ ಬುದ್ಧ, ಪಶ್ಚಾತ್ತಾಪವೇ ಪ್ರಾಯಶ್ಚಿತ್ತವಲ್ಲ, ಸ್ಥಿತಿಗಳೆಲ್ಲವೂ ಅನಿತ್ಯ ವಿಶುದ್ಧ ಹೊಂದಿರೆಂದ ಬುದ್ಧ, ತಿಳಿಯಿರೆಲ್ಲ ಅಚಲ ಮಾನಸಿಕ ವಿಮಕ್ತಿಯೇ ಪ್ರಜ್ಞೆ, ನಿನಗೆ ನೀನೇ ಶರಣಾಗು ಅನ್ಯಕ್ಕೆ ಬೇಡೆಂದ ಬುದ್ಧ, ಇವೆಲ್ಲಾವುಗಳನ್ನು ಒಳಗೊಂಡಿದೆ.
ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...
READ MORE