ಭಯೋತ್ಪಾದನೆ ಎಂಬ ಒಂದು ಭೀಕರ ಪ್ರಕ್ರಿಯೆಯನ್ನು ಅದರ ಚಾರಿತ್ರಿಕ ಹಿನ್ನೆಲೆ, ವಾಸ್ತವಿಕ ಸಂಗತಿಗಳ ಆಧಾರದ ಮೇಲೆ ಅರಿತುಕೊಳ್ಳುವುದು ಇಂದಿನ ತುರ್ತು.
’ಭಯೋತ್ಪಾದನೆ’ ಪುಸ್ತಕ ಈ ನಿಟ್ಟಿನಲ್ಲಿ ಒಂದು ಗಂಭೀರ ಪ್ರಯತ್ನ. ಭಯೋತ್ಪಾದನೆಯ ಅರ್ಥ, ಅದರ ಎರಡು ಪ್ರಮುಖ ಪ್ರಕಾರಗಳು, ಪ್ರಭುತ್ವ ಭಯೋತ್ಪಾದನೆಯ ಭೀಕರ ಮುಖ ಹಾಗೂ ಇಸ್ಲಾಂ ಸೇರಿದಂತೆ ಹಲವು ಧಾರ್ಮಿಕ ಮೂಲಭೂತವಾದಿಗಳು ಮತ್ತು ಭಯೋತ್ಪಾದನೆಯ ನಡುವೆ ಸಂಬಂಧವನ್ನು ವಿವರಿಸಲಾಗಿದೆ. ಹಾಗೆಯೇ ಭಯೋತ್ಪಾದನೆ ಈಗಿನ ಭೀಕರ ಸ್ವರೂಪ ಪಡೆಯುವುದರ ಹಿಂದೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಪಾತ್ರ.
ಭಾರತದಲ್ಲಿ ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮತಾಂಧತೆ ಹೇಗೆ ಜೋಡಿ ಶತ್ರುಗಳು ಎಂಬ ಅಂಶವನ್ನು ಲೇಖಕರು ಗಂಭೀರ ಸಾಮಾಜಿಕ-ರಾಜಕೀಯ ಅಧ್ಯಯನ ಮತ್ತು ವಿಶ್ಲೇಷಣೆಗಳ ಮೂಲಕ ವಿವರಿಸಿದ್ದಾರೆ.
ಲೇಖಕ ಡಾ. ಪ್ರಕಾಶ್ ಕೆ. ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಹಂಪಿ ಕನ್ನಡ ವಿವಿಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಉಗಮ ಮತ್ತು ಬೆಳವಣಿಗೆ ವಿಚಾರದಲ್ಲಿ ಪಿಹೆಚ್‌ಡಿ ಮಾಡಿರುವ ಇವರು ಅನುವಾದಕರೂ ಹೌದು. ಕೃತಿಗಳು : ಆಧುನಿಕೋತ್ತರವಾದ (ಭಾಷಾಂತರ), ಫಿಡೆಲ್ ಕ್ಯಾಸ್ಟ್ರೋ ( ಭಾಷಾಂತರ), ನಿರುದ್ಯೋಗ: ಒಂದು ಪೆಡಂಭೂತ, ಭಯೋತ್ಪಾದನೆ- ಸಿಐಎ, ಜಿಹಾದಿ, ಹಿಂದುತ್ವ, ಸಮಬಾಳಿನ ಸಂಘರ್ಷ: ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಒಂದು ನೋಟ. ...
READ MORE