ಭಾವನೆಗಳು-ಬದುಕಿನ ಸಾರ

Author : ಸದ್ಗುರು (ಜಗ್ಗಿ ವಾಸುದೇವ)

Pages 260

₹ 145.00




Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಭಾವನೆಗಳು-ಬದುಕಿನ ಸಾರ'  ಕೃತಿಯು ವೈಚಾರಿಕ ಬರಹಗಳನ್ನು ಒಳಗೊಂಡಿದೆ. ಲೇಖಕ ಸದ್ಗುರು ಅವರು ರಚಿಸಿದ್ದಾರೆ. ಒಬ್ಬ ವ್ಯಕ್ತಿಯು ಯಾವುದೇ ಭಾವನೆಗಳನ್ನು, ತನ್ನ ಬದುಕಿನಲ್ಲಿ ಒಂದು ಸೃಜನಾತ್ಮಕ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಅವಕಾಶವಿರುತ್ತದೆ. ಈ ಭಾವನೆಗಳತ್ತ ಒಂದು ಆಳವಾದ ನೋಟ ಬೀರಿರುವ ಸದ್ಗುರುಗಳು, ಇವುಗಳನ್ನು ಬದುಕಿನಲ್ಲಿ ಅಡ್ಡ ಬರುವ ಬಂಡೆಗಳಾಗಿ ನೋಡದೇ, ಮೇಲೆರುವ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳುವುದು ಹೇಗೆಂದು ತಮ್ಮ ಈ ಪುಸ್ತಕದಲ್ಲಿ ವಿವರಿಸಿದ್ದಾರೆ..ಜನರು ನಿರಂತರವಾಗಿ ಸಂಬಂಧಗಳನ್ನು ಬೆಸೆದುಕೊಳ್ಳುತ್ತಾರೆ. ಮುರಿದುಕೊಳ್ಳುತ್ತಾರೆ. ವಿಷಾದದ ಸಂಗತಿಯೆಂದರೆ, ಸಂಬಂಧಗಳೂ ಸಹ ಜನರನ್ನು ಮೇಲೆತ್ತಬಹುದು ಅಥವಾ ಕುಸಿಯುವಂತೆ ಮಾಡಬಹುದು. ಸಂಬಂಧಗಳು ಬಹುತೇಕರಿಗೆ ಏಕೆ ಇಂತಹ ಒಂದು ಗೊಂದಲವಾಗಿವೆ ? ನಮ್ಮೊಳಗಿನ ಯಾವ ಮೂಲಭೂತ ಪ್ರೇರಣೆಯು ಇನ್ನೊಬ್ಬರೊಡನೆ ಶಾರೀರಿಕ, ಮಾನಸಿಕ ಅಥವಾ ಭಾವನಾತ್ಮಕ ನಂಟಿನ ಒತ್ತಾಯವನ್ನು ಮಾಡುತ್ತಿದೆ. ಹೇಗೆ ಈ ನಂಟು, ಕಗ್ಗಂಟಾಗದಂತೆ ಉಳಿಸಿಕೊಳ್ಳುವುದು? ಈ ಮೂಲಭೂತ ಪ್ರಶ್ನೆಗಳನ್ನು ಈ ಕೃತಿಯ ಮೂಲಕ ಸದ್ಗುರುಗಳು ಅವಲೋಕಿಸಿದ್ದಾರೆ.

About the Author

ಸದ್ಗುರು (ಜಗ್ಗಿ ವಾಸುದೇವ)

.ಜಗ್ಗಿ ವಾಸುದೇವ ಅವರು ಜನಮಾನಸದಲ್ಲಿ ‘ಸದ್ಗುರು’ ಎಂದೇ ಖ್ಯಾತಿ. ಭಾರತೀಯ ಪರಂಪರೆ-ಸಂಸ್ಕೃತಿ, ಮಾನವ ಸ್ವಭಾವಗಳ ವ್ಯಾಖ್ಯಾನ, ಸಾಮಾಜಿಕ ಆಚರಣೆ-ಹಬ್ಬಗಳ-ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮದೇ ವಿಶಿಷ್ಟ ವೈಚಾರಿಕ ದೃಷ್ಟಿಕೋನದಿಂದ ಪ್ರವಚನಗಳನ್ನು ಹೇಳುವುದು ಇವರ ವ್ಯಕ್ತಿತ್ವದ ಪ್ರಮುಖ ಅಂಶ.  ಕೃತಿಗಳು: ಮರಣ,  ...

READ MORE

Related Books