ಭಾರತೀಯ ಸಮುದಾಯಗಳ ವರ್ಗಿಕರಣ ಹಾಗೂ ಈ ತೆರನಾದವರ್ಗಿಕರಣದಿಂದಾಗಿ ಸಮುದಾಯದ ಶೋಷಣೆಯು ಪರಿಸರವನ್ನು ಇಲ್ಲಿ ವಿಶ್ಲೇಷಿಸಲಾಗಿದ್ದು, ಅಂಬೇಡ್ಕರ್ ಅವರ ಚಿಂತನಗಳ ಮೂಲಕ ಭಾರತೀಯ ಸಮುದಾಯದ ಜಾತಿ ರಾಜಕಾರಣಗಳು ಹಾಗೂ ಆ ಮೂಲಕ ಇಂದಿನ ಭಾರತದಲ್ಲಿ ಮತಾಂತರದಂತಹ ಪ್ರಕ್ರಿಯೆಗೆ ಕಾರಣವನ್ನು ವಿಶ್ಲೇಷಿಸಲಾಗಿದೆ. ಭಾರತೀಯ ಪಸರದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮಹಿಳೆ, ಧರ್ಮ, ದಲಿತ ಚಿಂತನೆ ಹಾಗೂ ಮತಾಂತರವನ್ನು ಬಸವಯುಗ ಮತ್ತು ಡಾ.ಅಂಬೇಡ್ಕರ್ ಅವರ ಹೋರಾಟದ ಹಿನ್ನೆಲೆಯಲ್ಲಿ ವಿವರಿಸಿರುವುದು ಈ ಕೃತಿಯ ವಿಶೇಷ. ಈ ಗ್ರಂಥವು ಒಳಗೊಂಡಿರುವ ಅಧ್ಯಾಯಗಳೆಂದರೆ: ಭಾರತೀಯ ಸಮಾಜ ಮತ್ತು ಅಂಬೇಡ್ಕರ್ ,ಭಾರತೀಯ ಸಮಾಜ ಮತ್ತು ಜಾತಿ ,ಭಾರತೀಯ ಸಮಾಜ ಮತ್ತು ಅಸ್ಪಶ್ಯತೆ ,ಭಾರತೀಯ ಸಮಾಜ ಮತ್ತು ಮಹಿಳೆ ,ಧರ್ಮ ಮತ್ತು ದಲಿತರು ,ವಚನ ಚಳುವಳಿ ಮತ್ತು ಮತಾಂತರ , ಚರಿತ್ರೆ ಮತ್ತು ಮತಾಂತರ ,ದಲಿತ ಸಮಾಜ ಮತ್ತು ಮತಾಂತರ ಭಾರತೀಯ ಸಮಾಜದ ಸ್ವರೂಪವನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು. ನಮ್ಮ ಗ್ರಾಮಗಳು ಅಂದು ಇಂದು, ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ...
READ MORE