ಲೇಖಕ, ಚಿಂತಕ ಡಾ. ವಿ.ಮುನಿವೆಂಕಟಪ್ಪ ಅವರ ಕೃತಿ-ಭಾರತ ಭಾಗ್ಯವಿಧಾತ. ಕೃತಿಯಲ್ಲಿ 47 ಲೇಖನಗಳಿವೆ. ಲೇಖಕ ಮುನಿವೆಂಕಟಪ್ಪನವರ ಲೇಃನಗಳು ಸೇರಿದಂತೆ ಇತರೆ ಲೇಖಕರ ಬರೆಹಗಳೂ ಒಳಗೊಂಡಿವೆ. ಕಮ್ಯುನಿಸಂ ಹಾಗೂ ಅಂಬೇಡ್ಕರ್ ವಿಚಾರಗಳ ಮಧ್ಯೆ ದ್ವಂದ್ವ ಎದುರಿಸಿದರೆ ಈ ಎರಡೂ ವಿಚಾರಗಳು ವಿಭಿನ್ನ ಎಂಬಂತೆ ಕೆಲವರು ಪ್ರತಿಪಾದಿಸಿದರು. ಈ ಎರಡೂ ವಿಚಾರಗಳ ಮಿಶ್ರಣದೊಂದಿಗೆ ಹೊಸ ಚಿಂತನೆಯೂ ಬರಲಿಲ್ಲ ಎಂಬ ದುಃಖವೂ ಹಲವರಲ್ಲಿದೆ. ಇಂತಹ ಚಿಂತನೆಯ ಲೇಖನಗಳು ಇಲ್ಲಿವೆ. ಸಾಹಿತಿ ಡಾ. ನಂದೀಶ ಹಂಚೆ ಅವರು ಮುನ್ನುಡಿ ಬರೆದು ‘ಡಾ. ಮುನಿವೆಂಕಟಪ್ಪ ಅವರು ತಮ್ಮ ಇಡೀ ಜೀವಮಾನದುದ್ದಕ್ಕೂ ಅಂಬೇಡ್ಕರ್ ಅವರನ್ನು ಆರ್ಥ ಮಾಡಿಕೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಭಾರತ ಭಾಗ್ಯವಿಧಾತ ಗ್ರಂಥವು ಅವರ ತತ್ವಬದ್ಧತೆ ಹಾಗೂ ಅವರೊಳಗಿರುವ ಶುದ್ಧ ಸಾಹಿತ್ಯಕನಿಗೆ ಹಿಡಿದ ಕೈಗನ್ನಡಿಯಂತಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE