ಭಾರತದ ಸ್ವಾತಂತ್ರ್ಯಾನಂತರದ ಶೈಕ್ಷಣಿಕ ವಿಕಾಸವನ್ನು ವಾಸ್ತವದ ನೆಲೆಯಲ್ಲಿ ಗ್ರಹಿಸಿದ ಚಿಂತನಾ ಬರಹಗಳು ಈ ಕೃತಿಯಲ್ಲಿವೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿರುವ ಎಸ್.ನಿತ್ಯಾನಂದ ಪಡ್ರೆಯವರು,"...ಸ್ವಾತಂತ್ರ್ಯೋತ್ತರ ಶಿಕ್ಷಣ,ಪಠ್ಯ ರಚನೆ, ಶಿಕ್ಷಣ ಸುಧಾರಣೆ, ಶಿಕ್ಷಕರ ಸಶಕ್ತೀಕರಣ, ಶೈಕ್ಷಣಿಕ ಮನೋವಿಜ್ಞಾನ, ಮೌಲ್ಯ, ಭಾಷೆ-ಹೀಗೆ ಅನೇಕರು ಸ್ಪರ್ಶಿಸಲು ಅಂಜುವ, ಚರ್ಚಿಸಲು ಅನುಮಾನಿಸುವ ವಿಷಯಗಳೆಲ್ಲ ಚೊಕ್ಕಾಡಿಯವರಿಗೆ ಆಪ್ತವಾದವು" ಎಂದು ಹೇಳಿದ್ದಾರೆ.
ಈ ಕೃತಿಯು 35ವರ್ಷ ವಯಸ್ಸಿನ ಒಳಗಿನ ಲೇಖಕರಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ (ಬೆ. ಮ. ನ. ಸಾ). ಕೊಡುವ ಅರಳು ಪ್ರಶಸ್ತಿಗೆ ಪಾತ್ರವಾಗಿದೆ. ಕೃತಿಯ ಆಯ್ದ ಭಾಗಗಳು ಮಂಗಳೂರು ವಿಶ್ವವಿದ್ಯಾನಿಲಯ,ಧಾರವಾಡ ವಿಶ್ವ ವಿದ್ಯಾನಿಲಯ ಮತ್ತು ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾನಿಲಯದ ಪಠ್ಯಗಳಲ್ಲಿ ಸೇರಿದೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE