ಲೇಖಕಿ ಪ್ರಮೀಳಾ ಅವರ ಚೊಚ್ಚಲ ಕೃತಿ ‘ಬಿ. ಕೃಷ್ಣಪ್ಪರವರ ಚಿಂತನ ಮಂಥನ’. ಈ ಕೃತಿಗೆ ಮುನ್ನುಡಿ ಬರೆದ ಚಂದ್ರಗುಪ್ತ ‘ಬಿ.ಕೃಷ್ಣಪ್ಪರವರ ಅನನ್ಯ ಭಾವವುಳ್ಳ ಪ್ರತಿಭಾವಾತ್ಮಕವಾಗಿ ಚಿಂತನೆಗಳಿಗೆ ಒಳಪಡುವ, ಚಾರಿತ್ರಿಕ ಮಾನವೀಯ, ಸಮಸಮಾಜದ ನಿರ್ಮಾಣದ ನೆಲೆಗಳನ್ನು ಹಾಗೂ ನೆನಪುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತಹ, ಚಾರಿತ್ರಿಕ ಹಿನ್ನೆಲೆಯುಳ್ಳ ಪ್ರಮುಖ ಬರೆಹಗಳ ಕೃತಿಯನ್ನು ಸಾಹಿತ್ಯಕ್ಷೇತ್ರಕ್ಕೆ ನೀಡಿದ್ದಾರೆ. ಈ ಲೇಖನಗಳು ಸಮಾಜದಲ್ಲಿ ಬದುಕುತ್ತಿರುವ ಜನಸಮುದಾಯದ ಜೀವನ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸುವಂತಹ ಲೇಖನಗಳಾಗಿವೆ ಎಂಬುದನ್ನು ಲೇಖಕರು ತಮ್ಮ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. - ಬುದ್ಧ, ಅಂಬೇಡ್ಕರ್, ಲೋಹಿಯಾ, ಮುಂತಾದ ಸಮಾಜ ಸುಧಾರಕರ ದಾರ್ಶನಿಕರ ಆಶಯಗಳನ್ನು ಹೊತ್ತಂತಿರುವ ಸಾಹಿತ್ಯಲೇಖನಗಳಲ್ಲಿ ಬಿ.ಕೃಷ್ಣಪ್ಪ ಅವರು ಅನುಭವಿಸಿದ ನೋವು-ನಲಿವು, ಕೆಳ ಸಮುದಾಯದಲ್ಲಿ ವಾಸಿಸುತ್ತಿರುವ ಜನಸಾಮಾನ್ಯರ ನೈಜ ಬದುಕುನ್ನು ನೇರವಾಗಿ ಮಾತಿನ ಮೂಲಕ ಲೇಖನಗಳ ಮೂಲಕ ಕ್ರೋಢಿಕರಿಸಿ ವಿಶಾಲವಾದ ದಲಿತ ಚಳವಳಿ ಸಾಹಿತ್ಯಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಹೇಳಿರುವುದು ಪುಸ್ತಕದ ಗುಣವನ್ನು ಹೆಚ್ಚಿಸಿದೆ’ ಎಂದು ಪ್ರಶಂಸಿದ್ದಾರೆ.
ಲೇಖಕಿ ಪ್ರಮೀಳ ಇವರು ಮೂಲತಃ ಮೈಸೂರಿನ ಆಲನಹಳ್ಳಿಯವರು. ಇವರ ತಂದೆ-ಸಿದ್ದಯ್ಯ, ತಾಯಿ- ಸಿದ್ದರಾಜಮ್ಮ. ಬಿ.ಕೃಷ್ಣಪ್ಪನವರ ಚಿಂತನ ಮಂಥನ ಇವರ ಚೊಚ್ಜಲ ಕೃತಿ. ...
READ MORE