‘ಅನ್ವಯ’ ಅರವಿಂದ ಚೊಕ್ಕಾಡಿ ಅವರ ವೈಚಾರಿಕ ಲೇಖನಗಳಾಗಿವೆ. ಪ್ರಸ್ತುತ ಮಾನವನ ಏಳೆಯ ವಿಚಾರಗಳನ್ನೇ ಪ್ರಧಾನವಾಗಿ ಪರಿಗಣಿಸಿ ಸರಿಯಾದ ವಾದಸರಣಿಯಿಂದಲೂ ಅಸಂಖ್ಯಾತ ಉದಾಹರಣೆಗಳೊಂದಿಗೂ ಚರ್ಚೆಗೆ ಇಳಿಯುವ ಅರವಿಂದ ಚೊಕ್ಕಾಡಿ ಇಂದಿನ ಪ್ರತಿಭಾವಂತ ಪ್ರಜ್ಞಾವಂತ ಲೇಖಕರು. ವಿವರವಾಗಿ ತಿಳಿಹೇಳುವ, ಅರೆದು ಕುಡಿಸುವಂತಹ ತಮ್ಮ ಅಧ್ಯಾಪಕರ ಭಾಷಾ ಶೈಲಿಯಿಂದ ನಾಡಿನ ಎಲ್ಲ ಪತ್ರಿಕೆಗಳಲ್ಲೂ ಹೆಸರು ಮೂಡಿಸಿದ ಅವರು ಇಂದಿನ ಹಲವು ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ವಿಶ್ಲೇಷಿಸಿದ ಕೆಲವು ಲೇಖನಗಳು ಇಲ್ಲಿವೆ.
ಹೊಸತು - ಮಾರ್ಚ್ -2005
ಪ್ರಸ್ತುತ ಮಾನವನ ಏಳೆಯ ವಿಚಾರಗಳನ್ನೇ ಪ್ರಧಾನವಾಗಿ ಪರಿಗಣಿಸಿ ಸರಿಯಾದ ವಾದಸರಣಿಯಿಂದಲೂ ಅಸಂಖ್ಯಾತ ಉದಾಹರಣೆಗಳೊಂದಿಗೂ ಚರ್ಚೆಗೆ ಇಳಿಯುವ ಅರವಿಂದ ಚೊಕ್ಕಾಡಿ ಇಂದಿನ ಪ್ರತಿಭಾವಂತ ಪ್ರಜ್ಞಾವಂತ ಲೇಖಕರು. ವಿವರವಾಗಿ ತಿಳಿಹೇಳುವ, ಅರೆದು ಕುಡಿಸುವಂತಹ ತಮ್ಮ ಅಧ್ಯಾಪಕರ ಭಾಷಾಶೈಲಿಯಿಂದ ನಾಡಿನ ಎಲ್ಲ ಪತ್ರಿಕೆಗಳಲ್ಲೂ ಹೆಸರು ಮೂಡಿಸಿದ ಅವರು ಇಂದಿನ ಹಲವು ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ವಿಶ್ಲೇಷಿಸಿದ ಕೆಲವು ಲೇಖನಗಳು ಇಲ್ಲಿವೆ. ಆರ್ಥಿಕ ರಂಗದ ವಿಫಲತೆ ಮತ್ತು ಪ್ರಭುತ್ವದ ಅಸಹಾಯಕತೆ ಇವೆರಡು ನಮ್ಮಲ್ಲಿ, ಎದ್ದುಕಾಣುವ ಅಂಶ. ಜನಸಾಮಾನ್ಯರ ಯಾವುದೇ ತೊಂದರೆಗಳಿಗೂ ಸ್ಪಂದಿಸಲಾಗದಂಥ ಅವ್ಯವಸ್ಥೆಯಿಂದಾಗಿ ಎಲ್ಲ ರಂಗಗಳಲ್ಲಿ ತಲೆದೋರಿದ ವೈಫಲ್ಯವನ್ನು ಗುರುತಿಸುತ್ತ ಜಾಗತೀಕರಣದ ಸಮ್ಮೋಹಿನಿಗೆ ಬಲಿಯಾಗುವ ಅಪಾಯಗಳು ನಮ್ಮ ಗಮನ ಸೆಳೆದಿದ್ದಾರೆ. ಈ ಲೇಖನಗಳು ಇಂದಿನ ಬಿಕ್ಕಟ್ಟಿಗೆ ಎಚ್ಚರಿಕೆಯ ದನಿಯಾಗಬಲ್ಲವು.
©2024 Book Brahma Private Limited.