‘ಆಂತರ್ಯ ಲಹರಿ’ ಕೃತಿಯು ಅನಿತಾ ಪಿ. ಕುಮಾರ್ ಅವರ ವೈಚಾರಿಕ ಲೇಖನಸಂಕಲನವಾಗಿದೆ. ಅಂತರಾಳದಲ್ಲಿ ಮಡುಗಟ್ಟಿರುವ ಹಲವು ವೈಚಾರಿಕ ಚಿಂತನೆಗಳಿಗೆ ಅಕ್ಷರ ರೂಪ ಕೊಟ್ಟಿರುವುದನ್ನು ನಾವು ಇಲ್ಲಿ ಕಾಣಬಹುದು. ಬದುಕಿನ ಪಯಣದಲ್ಲಿ ಎದುರಾಗುವ ಎಷ್ಟೋ ಸನ್ನಿವೇಶಗಳನ್ನು ಕಂಡಾಗ ಒಂದು ಕ್ಷಣ ನಮ್ಮಲ್ಲೇ ಏಕೆ ಹೀಗೆ? ಎಂಬ ಪ್ರಶ್ನೆ ಉದ್ಭವಿಸಿದೆ ಇರದು. ಇಂತಹ ಹಲವಾರು ಪ್ರಶ್ನೆಗಳನ್ನು ನಮ್ಮ ಮುಂದೆ ಬಿಚ್ಚಿಟ್ಟು ಒಂದು ಕ್ಷಣ ಯೋಚನಾಮಗ್ನರಾಗುವಂತೆ ಮಾಡುತ್ತದೆ ಈ ಕೃತಿ.
ಅನಿತ.ಪಿ.ಕೆ ಎಂಬ ಕಾವ್ಯನಾಮವಿರುವ ಅನಿತ ಪ್ರಸನ್ನಕುಮಾರ್ ಅವರು ಬೆಂಗಳೂರಿನವರು. ಹವ್ಯಾಸಿ ಬರಹಗಾರ್ತಿ,ಹಾಡುಗಾರ್ತಿಯಾಗಿರುವ ಇವರು ಕರ ಮುಗಿವೆ ಚಾಮುಂಡಿ ತಾಯೆ ಹಾಗೂ ಬಾಲಕೃಷ್ಣ ಸಾಹಿತ್ಯದ ಭಕ್ತಿಗೀತೆ ಸಿಡಿಗಳನ್ನು ಹೊರತಂದಿದ್ದಾರೆ. ಕೃತಿ: " ಕಾವ್ಯ ಪುಷ್ಕರ " ಎಂಬ ಕವನ ಸಂಕಲನ ಹೊರ ಬಂದಿದೆ. ಪ್ರಶಸ್ತಿ: ಕನ್ನಡ ಕವನ ರಚನೆಗಾಗಿ 2022ರಲ್ಲಿ ಇಂಡಿಯಾ ಸ್ಟಾರ್ ರಿಪಬ್ಲಿಕ್ ಪ್ರಶಸ್ತಿ ಲಭ್ಯವಾಗಿದೆ. ...
READ MORE