ಅಮ್ಮಾ ಬಾಗಿಲು ತೆಗಿ

Author : ಹೂ.ವೆ. ಶೇಷಾದ್ರಿ

Pages 90

₹ 18.00




Year of Publication: 1970
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼಅಮ್ಮಾ ಬಾಗಿಲು ತೆಗಿʼ ಲೇಖಕ ಹೂ.ವೆ. ಶೇಷಾದ್ರಿ ಅವರ ವೈಚಾರಿಕ ಬರಹಗಳ ಪುಸ್ತಕವಿದು.  ವೈಚಾರಿಕ ಕ್ಷೇತ್ರದಲ್ಲಿ ಹೊ.ವೆ. ಶೇಷಾದ್ರಿಯವರದು ಅದ್ವಿತೀಯ ಪ್ರತಿಭೆ. ಅವರ ಲೇಖನಿಯಿಂದ ಈ ತನಕ ಸೃಷ್ಟಿಗೊಂಡಿರುವ ಬರಹಗಳು ಅಗ್ರಪಂಕ್ತಿಯಲ್ಲಿ ಕಂಗೊಳಿಸುತ್ತವೆ. ನಮ್ಮ ನಿತ್ಯ ಜೀವನದ ನಿದರ್ಶನಗಳಲ್ಲಿ ಅಡಗಿರಬಹುದಾದ ಅಪೂರ್ವ ಅರ್ಥಗಳನ್ನು ಅನಾವರಣ ಮಾಡುವ, ತನ್ಮೂಲಕ ಓದುಗರ ಬುದ್ಧಿ ಭಾವಗಳನ್ನು ಅರಳಿಸುವಂತಹ ಸಮರ್ಪಕ ವಿಧಾನವೊಂದನ್ನು ಅಳವಡಿಸಿಕೊಂಡು, ಈ ಪುಸ್ತಕವನ್ನು ರಚಿಸಲಾಗಿದೆ. ನಿತ್ಯ ಜೀವನದಲ್ಲಿ ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ತಿಳಿವಳಿಕೆಯನ್ನು ಈ ಕೃತಿಯು ಮಾಡಿಕೊಡುತ್ತದೆ.

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Related Books