ಅಂಬೇಡ್ಕರ್ ವಾದದ ಆಚರಣೆ ಎಂಬುದು ಲೇಖಕ ಸಿ.ಜಿ. ಲಕ್ಷ್ಮೀಪತಿ ಅವರ ವೈಚಾರಿಕ ಕೃತಿ. ಅಂಬೇಡ್ಕರ್ ವಾದವನ್ನು ಸ್ವಹಿತಕ್ಕಾಗಿ ಬಳಸುತ್ತಿರುವ ಇಂದಿನ ದಿನಮಾನಗಳಲ್ಲಿ ಅಂಬೇಡ್ಕರ್ ವಾದವನ್ನು ವ್ಯಕ್ತಿಗತ ಹಾಗೂ ಸಾಮಾಜಿಕ ನೆಲೆಯಲ್ಲಿ ಸಂಭ್ರಮಿಸುವುದು ಅಪರೂಪವೇ ಸರಿ. ಅಂಬೇಡ್ಕರ್ ವಾದವು ಮಾರ್ಷಲ್ ಆರ್ಟ್ಸ್ ಇದ್ದ ಹಾಗೆ. ಎದುರಾಳಿಯನ್ನು ಮಣಿಸುವಾಗ ಒಂದೇ ತಂತ್ರ ಬಳಸುವುದಿಲ್ಲ. ಎಂಬ ಉಪಶೀರ್ಷಿಕೆ ಇರುವ ಈ ಕೃತಿಯು ಅಂಬೇಡ್ಕರ್ ವಾದವನ್ನು ಸೂಕ್ತ ಹಾಗೂ ಸಮಂಜಸವಾಗಿ ಬಳಸುವ ಕುರಿತು ಪ್ರತಿಪಾದಿಸುತ್ತದೆ. ದಲಿತ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.
ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿ.ವಿ.ಯಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಮೈಸೂರು ಮುಕ್ತ ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಕೃತಿಗಳು: ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್ ಲ್ಯಾಂಡ್ ಎಂಬ ಮುಗುಳ್ನಗೆ ...
READ MORE