ಅಂಬೇಡ್ಕರ್ ದೃಷ್ಟಿಯಲ್ಲಿ ಮನು-ಎಂಬುದು ಲೇಖಕ ಕೆ. ಮಾಯಿಗೌಡ ಅವರ ಕೃತಿ. ಭಾರತದಲ್ಲಿಯ ಅಸಮಾನ ವ್ಯವಸ್ಥೆಗೆ ಜಾತಿ ಪದ್ಧತಿಯೇ ಮೂಲ ಕಾರಣ. ಈ ಜಾತಿಯನ್ನು ಸೃಷ್ಟಿಸಿದವರು ಮನು. ಜಾತಿಯು ಮನುಷ್ಯನ ಘನತೆಗೆ ಕುಂದು ತರುತ್ತದೆ. ಹುಟ್ಟಿನಿಂದ ಕೆಳವರ್ಗದವನಿದ್ದು, ಆತನನ್ನು ಕೀಳಾಗಿ ಕಾಣುವುದರಿಂಧ ಆತನ ಪ್ರತಿಭೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಕೆಳವರ್ಗದ ಜನತೆಯು ಸ್ವಾಭಿಮಾನದೊಂಧಿಗೆ ಬದುಕುವುದು ಅಸಾಧ್ಯ. ಹೀಗಾಗಿ, ಮನು ಸೃಷ್ಟಿಸಿದ ವ್ಯವಸ್ಥೆಗೆ ಪ್ರತಿಭಟನಾರ್ಥವಾಗಿ ಅಂಬೇಢ್ಕರ್ ಅವರು, ಮನು ಬರೆದ ‘ಮನು ಸ್ಮೃತಿ’ಯನ್ನು ಸುಟ್ಟು ಬಿಡುತ್ತಾರೆ. ಇಂತಹ ಘಟನೆಗಳಾಧರಿತ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.
ಕೆ. ಮಾಯಿಗೌಡ ಅವರು ಮಂಡ್ಯ ಜಿಲ್ಲೆಯ ನವಿಲುಮಾರನಹಳ್ಳಿಯವರು. ನಿವೃತ್ತ ಮುಖ್ಯೋಪಾಧ್ಯಯರು ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಒಡನಾಟ. ಸ್ವಾತಂತ್ಯ್ರಯೋಧ ಕನಕಪುರದ ಕರಿಯಪ್ಪನವರು, ಅಂಬೇಡ್ಕರ್, ಕೋವೂರ್, ಬಸವ, ಮಾರ್ಕ್ಸ್ , ಪೆರಿಯಾರ್ ಚಿಂತನೆಗಳಿಂದ ಪ್ರೇರಣೆ. ಸ್ಥಳೀಯ ಪತ್ರಿಕೆಯಲ್ಲೂ ಕೆಲಸ ಮಾಡಿದರು. ಮಾಜಿ ಸಚಿವ ಬಿ. ಬಸಲಿಂಗಪ್ಪ ಅವರ ಒಡನಾಟದಿಂದ (1978) ಪಾಂಡವಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ನಂತರ, ದೇವರಾಜ ಅರಸು ಅವರೊಂದಿಗೆ ಇದ್ದ ಆತ್ಮೀಯ ಒಡನಾಟವು ಇತ್ತು. ಕೋವೂರು ಕಂಡ ವೈಜ್ಞಾನಿಕ ಸತ್ಯ-ಇವರ ಅನುವಾದಿತ ಕೃತಿ. ...
READ MORE