‘ಅಜ್ಞಾನದ ಕೇಡು’ ಲೇಖಕ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಕೃತಿ. ಡಾ. ರಾಜಶೇಖರ ನಾರನಾಳ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಹಿಂದಿನಿಂದ ಬೇರುಬಿಟ್ಟಿರುವ ಜಾತಿ ಪದ್ಧತಿ, ಮೌಢ್ಯಗಳು, ಧರ್ಮ ಮತ್ತು ದೇವರ ಹೆಸರಿನ ಮೇಲೆ ನಡೆದಿರುವ ದಗಲ್ಬಾಜಿತನ ಮುಂತಾದವುಗಳ ಕುರಿತು ವಸ್ತುನಿಷ್ಠವಾಗಿ ಬರೆಯುವವರಲ್ಲಿ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಮುಖರು. ‘ಪಿತನಾಚಾರವ ಉದ್ಧರಿಸುವವನು ಪುತ್ರನಲ್ಲದೆ ಹದಗೆಡಿಸುವವನು ಪುತ್ರನಲ್ಲ’ಎಂಬ ಚೆನ್ನಬಸವಣ್ಣನವರ ವಚನದಂತೆ ಲಿಂಗಣ್ಣ ಸತ್ಯಂಪೇಟೆ ಅವರು ಹಾಕಿಕೊಟ್ಟ ಬಸವಮಾರ್ಗದಲ್ಲಿಯೆ ದಿಟ್ಟ, ಧೀರ ಹೆಜ್ಜೆ ಇಟ್ಟು ಮುನ್ನೆಡೆಯುತ್ತಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ವಚನಗಳ ಬೆಳಕಿನಲ್ಲಿ ಪ್ರತಿಯೊಬ್ಬನು ಸಹ ತಮ್ಮ ಅಜ್ಞಾನ-ಅಂಧಕಾರಗಳಿಂದ ದೂರವಾಗುವ ವೈಚಾರಿಕ ಸಾಮರ್ಥ್ಯ ಪಡೆಯುವಷ್ಟು ಇಲ್ಲಿಯ ಬರೆಹಗಳು ಪ್ರಖರವಾಗಿವೆ.
ವಿಶ್ವಾರಾಧ್ಯ ಸತ್ಯಂಪೇಟೆ ಮೂಲತಃ ಯಾದಗಿರಿ ಜಿಲ್ಲೆಯ (08-06-1969) ಸುರಪುರ ತಾಲೂಕಿನ ಸತ್ಯಂಪೇಟೆಯವರು. ತಂದೆ ಹಿರಿಯ ಲೇಖಕ, ಚಿಂತಕ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ, ತಾಯಿ- ಶಾಂತಮ್ಮ ಸತ್ಯಂಪೇಟೆ. ಬಿ.ಎ ಮುಗಿಸಿ, ಡಿಪ್ಲೋಮಾ ಇನ್ ಜರ್ನಲಿಸಂ ಪೂರ್ಣಗೊಳಿಸಿದ್ದಾರೆ. ಹವ್ಯಾಸಿ ಪತ್ರಕರ್ತರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಹಾಗೂ ಸತ್ಯಂಪೇಟೆಯ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ. ಈ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಬಸವ ಬೆಳಕು ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ‘ಮನೆಯಲ್ಲಿ ಮಹಾಮನೆ’ ಶೀರ್ಷಿಕೆಯಡಿ ಬಸವ ತತ್ವ ಪ್ರಚಾರ-ಪ್ರಸಾರವೇ ಜೀವಾಳವಾಗಿರಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಸಾಹಿತ್ಯ ಕೃಷಿಯೂ ಅವರ ಇಷ್ಟದ ಹವ್ಯಾಸ. ಚಿತ್ತ ಚೋರರು, ಬಸವಣ್ಣ ಮತ್ತು ...
READ MORE