‘ಮುಗಿಲೆತ್ತರದಲ್ಲಿ ನಾ ಕಂಡ ಕಾರಂತರು’ ಕೃತಿಯು ಲಲಿತಮ್ಮ ಚಂದ್ರಶೇಖರ್ ಅವರ ಕೃತಿಯಾಗಿದೆ. ಇಲ್ಲಿ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕೃತಿಯ ಕುರಿತು ಲೇಖಕಿ ವಿವರಿಸುತ್ತಾ, ತಾನು ಹೇಗೆ ಕಾರಂತರ ಸಾಹಿತ್ಯದ ಅಭಿಮಾನಿಯಾದೆ ಎನ್ನುವುದನ್ನು ತಿಳಿಸುತ್ತಾರೆ. ಅಷ್ಟೇಅಲ್ಲದೆ ಕಾರಂತರ ಕಾದಂಬರಿ ಕಡಲಿನಂತೆ. ಕಡಲಿನ ನೀರನ್ನು ಪಾತ್ರೆಯಲ್ಲಿ ತುಂಬಲು ಹೋಗಿ ಅಯ್ಯೋ! “ಕಡಾಯಿಯಲ್ಲಿ ಕಡಲು ತುಂಬೇನೆ” ಎಂದು ಕಡಲಿಗೇ ನೀರನ್ನು ಸುರಿದು ಕಡಲನ್ನು ಅವರ ಸೌಂದರ್ಯವನ್ನು, ರುದ್ರ ಗಂಭೀರತೆಯನ್ನು ನೋಡಿ ಸವಿಯುತ್ತಾ ಮೈಮರೆತಂತೆ. ಕಾರಂತರ ಕಾದಂಬರಿಗಳನ್ನು ಓದಬೇಕು, ಸವಿಯಬೇಕು, ಸವಿದು ಮತ್ತೆ ಓದಬೇಕು. ಮಲೆನಾಡಿನ ಜೀವನದ ಬದುಕಿನ ಅಮರ ಚಿತ್ರಗಳು ಕಾರಂತರ ಕಾದಂಬರಿಗಳು. ಅಲ್ಲಿನ ಜನಜೀವನವನ್ನು, ಮಲೆನಾಡಿನ ಸೌಂದರ್ಯವನ್ನು, ಕಾಡಿನ ಕಥನವನ್ನು ಕಾರಂತರ ಕಾದಂಬರಿಗಳಲ್ಲಿ ಮಾತ್ರ ಕಾಣಬಹುದು.
©2024 Book Brahma Private Limited.