ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಸಂಪಾದಿಸಿದ ಕೃತಿ-ರಂಗ ಸಿರಿ. ವೃತ್ತಿ ರಂಗಭೂಮಿ ಕಲಾವಿದರ ಜೀವನ ಚಿತ್ರಣ ಕಟ್ಟಿಕೊಟ್ಟ ಕೃತಿ. ವೃತ್ತಿ ರಂಗಭೂಮಿಯ ವೈವಿಧ್ಯತೆ, ವೈಶಾಲ್ಯತೆ ಹೆಚ್ಚಿಸಿದ ಏಳು ಕಲಾವಿದರ ಬದುಕಿನ ಚಿತ್ರಣ ನೀಡಲಾಗಿದೆ. ರಂಗ ಕಲಾವಿದರ ಬದುಕು-ಬವಣೆ-ಸಾಧನೆ-ಅನುಭವ ಹೀಗೆ ವಿವಿಧ ಆಯಾಮಗಳು ಹೊಸ ಹೊಸ ರಂಗ ಕಲಾವಿದರಿಗೆ ದಾರಿದೀಪವಾಗಲಿವೆ. ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಕೋಡ್ಲಿ ಕಂಟೆಪ್ಪ ಮಾಸ್ತರ, ಸುಭದ್ರಮ್ಮ ಮನ್ಸೂರು, ಡಿ.ಎಸ್, ಕುಮಾರ, ಮಲ್ಲಿನಾಥ ಅಲೇಗಾಂವ್, ರಾಜಣ್ಣ ಜೇವರ್ಗಿ ಇವರ ರಂಗಸಾಧನೆಯನ್ನು ಸಂಕ್ಷಿಪ್ತವಾಗಿಯಾದರೂ ಸುಂದರವಾಗಿ ಚಿತ್ರಿಸಿದ ಬರಹಗಳಿವೆ. ಡಾ. ಸುರೇಶ ಎಲ್. ಜಾಧವ್ ಅವರು ಕೃತಿಗೆ ಬೆನ್ನುಡಿ ಬರೆದು ಲೇಖಕರ ರಂಗ ಕಳಕಳಿಯನ್ನು ಪ್ರಶಂಸಿಸಿದ್ದಾರೆ.
ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...
READ MORE