ವಿಜ್ಞಾನ ಮತ್ತು ವಿಜ್ಞಾನಿಗಳು: ದಂತಕಥೆಗಳ ಸಂಕಲನ

Author : ಸೇತುರಾವ್ ಎಂ.ಎ.

Pages 237

₹ 105.00




Year of Publication: 2015
Published by: ನ್ಯಾಷನಲ್ ಬುಕ್ ಟ್ರಸ್ಟ್,
Address: ವಸಂತ ಕುಂಜ, ನವದೆಹಲಿ

Synopsys

ಹಿರಿಯ ಲೇಖಕ ಎನ್.ಎ. ಕೊಠಾರಿ ಸೇರಿದಂತೆ ಇತರೆ (ಸುದಾಂಶು ಎಸ್. ಪಾಲ್ ಸುಲೆ, ಎಸ್. ಎಂ. ಪರೇಖ್, ಎಂ. ಪಿ. ನವಲ್ಕರ್ ) ನಾಲ್ವರು ಲೇಖಕರು ಇಂಗ್ಲಿಷಿನಲ್ಲಿ (Of Science and Scientists-1994) ಬರೆದ ಕೃತಿಯನ್ನು ಲೇಖಕ ಎಂ.ಎ. ಸೇತುರಾವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ವಿಜ್ಞಾನ ಮತ್ತು ವಿಜ್ಞಾನಿಗಳು: ದಂತಕಥೆಗಳ ಸಂಕಲನ. ನ್ಯಾಷನಲ್ ಬುಕ್ ಟ್ರಸ್ಟ್ ತನ್ನ ವಿಜ್ಞಾನ ಮಾಲಿಕೆಯಡಿ ಪ್ರಕಟಿಸಿದ ಕೃತಿ ಇದು. ಮಕ್ಕಳಿಗೆ ಶಿಕ್ಷಣ ಹಾಗೂ ನೀತಿಯನ್ನು ಬೋಧಿಸುವುದು ಕೃತಿಯ ಉದ್ದೇಶ. ವಿಜ್ಞಾನಿಗಳ ದಂತಕಥೆಗಳು ಮಕ್ಕಳಲ್ಲಿ ಪ್ರೇರಣೆ ನೀಡುತ್ತವೆ. ಜೀವನೋತ್ಸಾಹ ಹೆಚ್ಚಿಸುತ್ತವೆ. ವೈಜ್ಞಾನಿಕ ಮನೋಭಾವ ಬೆಳೆಸುತ್ತವೆ. ಪ್ರಕೃತಿಯ ಕುರಿತು ಕುತೂಹಲ ಮೂಡಿಸುತ್ತವೆ. ವಿಜ್ಞಾನಿಗಳ ವ್ಯಕ್ತಿಚಿತ್ರಣಗಳನ್ನು ನೀಡುತ್ತದೆ. `ವಿಜ್ಞಾನ, ವಿಜ್ಞಾನಿ ಮತ್ತು ಸತ್ಯ’ ಮತ್ತು `ವಿನೋದ, ನಮ್ರತೆ ಮತ್ತು ಮಾನವೀಯತೆ’ ಹೀಗೆ ವಿವಿಧ ಅಧ್ಯಾಯಗಳನ್ನು ಒಳಗೊಂಡಿವೆ.

About the Author

ಸೇತುರಾವ್ ಎಂ.ಎ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ (ಕ.ರಾ.ವಿ.ಪ.) ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದ ಎಂ.ಎ. ಸೇತುರಾವ್‌ ಅವರು ನಂತರ ಕರಾವಿಪದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಕರ್ನಾಟಕದಲ್ಲಿ ಜನಪ್ರಿಯ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಯತ್ನಿಸಿದವರಲ್ಲಿ ಪ್ರಮುಖರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಅವರಿಗೆ ವಿಜ್ಞಾನ ಜನಪ್ರಿಯಗೊಳಿಸಿದವರಿಗೆ ನೀಡಲಾಗುವ ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಗೌರವ ಪ್ರಶಸ್ತಿ ದೊರೆತಿದೆ. ...

READ MORE

Related Books