`ಕರ್ನಾಟಕದ ಹಿಂದುಸ್ತಾನಿ ಸಂಗೀತಗಾರರು’ ಸದಾನಂದ ಕನವಳ್ಳಿ ಅವರ ಕೃತಿಯಾಗಿದೆ. ಬೆಳಗಾವಿ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಿದ್ಧಿ-ಪ್ರಸಿದ್ಧಿಯನ್ನು ಪಡೆದು ಅನೇಕ ಬಿರುದುಗಳನ್ನೂ ಸನ್ಮಾನ ಪ್ರಶಸ್ತಿಗಳನ್ನೂ ವಿಶೇಷ ಪರಿಶ್ರಮದಿಂದ ಗಳಿಸಿದ ಕರ್ನಾಟಕದ ಮಹಾನ್ ಪ್ರತಿಭೆಗಳನ್ನು ಪರಿಚಯಿಸಲಾಗಿದೆ.
ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...
READ MOREಹೊಸತು-2004- ಮೇ
ಬೆಳಗಾವಿ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಿದ್ಧಿ-ಪ್ರಸಿದ್ಧಿಯನ್ನು ಪಡೆದು ಅನೇಕ ಬಿರುದುಗಳನ್ನೂ ಸನ್ಮಾನ ಪ್ರಶಸ್ತಿಗಳನ್ನೂ ವಿಶೇಷ ಪರಿಶ್ರಮದಿಂದ ಗಳಿಸಿದ ಕರ್ನಾಟಕದ ಮಹಾನ್ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ಸಂಗೀತವನ್ನು ಯಾವುದೇ ದೇಶ ಪ್ರದೇಶದ ಗಡಿಭಾಗಗಳು ಬಂಧಿಸಿಡಲಾರವು. ಅವೆಲ್ಲವನ್ನೂ ಮೀರಿ ಸಂಗೀತ ಬೆಳೆಯುತ್ತದೆ ಮತ್ತು ಪ್ರತಿಭೆಗೆ ಒಲಿಯುತ್ತದೆ. ಇಲ್ಲಿ ಕೇವಲ ಸಂಗೀತಗಾರರನ್ನು ಮಾತ್ರ ಕರ್ನಾಟಕದವರೆಂದು ಗುರುತಿಸಿ ಅವರ ಸಾಧನೆಯೊಂದಿಗೆ ಸಂಗೀತದ ಘರಾಣೆಗಳನ್ನು ಸಹ ವಿವರವಾಗಿ ನೀಡಲಾಗಿದೆ.