‘ಜಾನಪದ ತಲೆಮಾರು ಸರಣಿ ಕೃತಿಯಗಳ ಮೂಲಕ ನಮ್ಮ ನಾಡೋಜರ ಕತೆ ಹೇಳ ಹೊರಟಿದ್ದಾರೆ ಲೇಖಕರಾದ ಹಿ.ಶಿ. ರಾಮಚಂದ್ರೇಗೌಡ ಮತ್ತು ಚಕ್ಕೆರೆ ಶಿವಶಂಕರ. ಪ್ರಸ್ತುತ ಕೃತಿಯಲ್ಲಿ ಜಾನಪದ ತಲೆಮಾರಿನ ಸಾಧಕರನ್ನು ನಾಲ್ಕು ಹಂತಗಳಲ್ಲಿ ಗುರುತಿಸಿ ನಾಲ್ಕು ಕೃತಿಗಳಾಗಿ ಹೊರತಂದಿದ್ದಾರೆ.
ಈ ಕೃತಿಯಲ್ಲಿ ಸುಮಾರು ಐವತ್ತೆಂಟು ಜಾನಪದ ತಜ್ಞರನ್ನು ಪರಿಚಯಿಸಲಾಗಿದೆ. ಎಚ್.ಜೆ. ಲಕ್ಕಪ್ಪಗೌಡ, ಸೋಮಶೇಖರ ಇಮ್ರಾಪುರ, ಹ.ಕ. ರಾಜೇಗೌಡ, ಡಾ. ರಾಮೇಗೌಡ, ಡಾ. ರಾಮೇಗೌಡ (ರಾ ಗೌ), ಹಂಪ ನಾಗರಾಜಯ್ಯ, ಆರ್.ಸಿ. ಹಿರೇಮಠ, ಎನ್.ಆರ್. ನಾಯಕ್, ಎಂ.ಎಸ್. ಲಠ್ಠೆ, ಆರ್.ವಿ.ಎಸ್. ಸುಂದರಂ, ಎಂ.ಜಿ. ಬಿರಾದಾರ, ಎಂ.ಎಂ. ಕಲಬುರ್ಗಿ, ಬಿ.ಬಿ. ಹೆಂಡಿ, ಪಿ.ಕೆ. ಖಂಡೋಬಾ, ವಿಲ್ಯಂ ಮಾಡ್ತಾ , ಹಿ.ಶಿ. ರಾಮಚಂದ್ರೇಗೌಡ, ಶ್ರೀಕಂಠ ಕೂಡಿಗೆ, ಕು.ಶಿ. ಹರಿದಾಸ ಭಟ್ಟ, ಕೃಷ್ಣಮೂರ್ತಿ ಹನೂರು, ಬಸವರಾಜ ಮಲಶೆಟ್ಟಿ, ಕ್ಯಾತನಹಳ್ಳಿ ರಾಮಣ್ಣ, ಟಿ.ಎಸ್. ರಾಜಪ್ಪ, ನಿಂಗಣ್ಣ ಸಣ್ಣಕ್ಕಿ, ಬಿ.ಎಸ್. ಸ್ವಾಮಿ, ಶ್ರೀರಾಮ ಇಟ್ಟಣವರ, ಎಸ್.ಎಂ. ವೃಷಭೇಂದ್ರಸ್ವಾಮಿ, ಜಿ.ವಿ. ದಾಸೇಗೌಡ, ಶ್ರೀ ಕೃಷ್ಣ ಭಟ್ ಅರ್ತಿಕಜೆ, ಅಂಬಳಿಕೆ ಹಿರಿಯಣ್ಣ, ಎಚ್.ಎಂ. ಮಹೇಶ್ವರಯ್ಯ, ಪಿ.ಕೆ. ರಾಜಶೇಖರ, ಪುರುಷೋತ್ತಮ ಬಿಳಿಮಲೆ, ಕೆ. ಚಿನ್ನಪ್ಪಗೌಡ, ರಾಜೇಗೌಡ ಹೊಸಹಳ್ಳಿ ಮುಂತಾದ ಜಾನಪದ ತಜ್ಞರ ಕುರಿತ ಸಂಪೂರ್ಣ ಮಾಹಿತಿ ಇದರಲ್ಲಿದೆ.
ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ...
READ MORE