ಉಜ್ವಲ ಕಿಡಿಗಳು-ಲೇಖಕ ಅರವಿಂದ ಗುಪ್ತ ಅವರ ಕೃತಿಯನ್ನು ಲೇಖಕಿ ಎಚ್.ಎನ್. ಗೀತಾ ಅವರ ಕನ್ನಡೀಕರಿಸಿದ್ದಾರೆ. ವಿಜ್ಞಾನಿಗಳು ಎಂದರೆ ಪ್ರಯೋಗಾಲಯದಲ್ಲಿ ಪ್ರಯೋಗ ಮಾಡುತ್ತಾ ಒಂಟಿಯಾಗಿ ಕಾಣುವ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ, ವಿಜ್ಞಾನಿಗಳು ಬಹುಮುಖ ವ್ಯಕ್ತಿತ್ವ ಹೊಂದಿದ್ದು, ಸಾಹಿತ್ಯ ವನ್ನೂ ರಚಿಸುತ್ತಿದ್ದರು ಎಂಬ ಅಂಶ ಬೇಗನೇ ಹೊಳೆಯದು. ಕಥೆ-ಕವನ- ಚಿತ್ರಕಲೆ-ಸಂಗೀತ ಕಲೆಯಲ್ಲಿ ಆಸಕ್ತಿ ಇರುತ್ತದೆ. ಹೀಗೆ ಬಹುಮುಖ ವ್ಯಕ್ತಿತ್ವದ ವಿಜ್ಞಾನಿಗಳನ್ನು ಪರಿಚಯಿಸುವುದು ಈ ಕೃತಿಯ ಉದ್ದೇಶ. ವಿಜ್ಞಾನಿಗಳ ಪೈಕಿ ಮಹಿಳೆಯರೂ ಇದ್ದು, ಬದುಕಿನಲ್ಲಿ ಅವಮಾನ, ಹಿಂಸೆ ಸಹಿಸಿಯೂ ಅವರು ಮಾಡಿದ ಸಾಧನೆ ಗಮನಾರ್ಹ. ಇಂತಹ ಸ್ಫೂರ್ತಿಯ ವಿಜ್ಞಾನಿಗಳನ್ನು ಲೇಖಕರು ‘ಉಜ್ವಲ ಕಿಡಿಗಳು’ ಎಂದು ಕರೆದಿದ್ದು, ಪುಸ್ತಕದ ಶೀರ್ಷಿಕೆಯೂ ಆಗಿದೆ. ಈ ಕೃತಿಯಲ್ಲಿ 39 ಭಾರತೀಯ ವಿಜ್ಞಾನಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಬಿ. ಎಸ್ಸಿ ಪದವೀಧರರಾಗಿರುವ ಎಚ್. ಎನ್. ಗೀತಾ ಅವರಿಗೆ ಬಾಲ್ಯದಿಂದಲೇ ಕವನ ರಚನೆಯಲ್ಲಿ ಆಸಕ್ತಿ. ಜಾಹಿರಾತು ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾಗ ಅನುವಾದದಲ್ಲೂ ಆಸಕ್ತಿ ಬೆಳೆಸಿಕೊಂಡರು. ಅಚಲ ಪತ್ರಿಕಾ ಬಳಗದಲ್ಲಿ ಕಾರ್ಯ ನಿರ್ವಹಿಸಿರುವ ಅವರಿಗೆ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಸ್ತುತ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ಅವರಿಗೆ ಸಂಗೀತ, ಪ್ರವಾಸ ಹಾಗೂ ಚಾರಣಗಳಲ್ಲಿ ಆಸಕ್ತಿ, ನವಕರ್ನಾಟಕ ಪ್ರಕಟಿಸಿರುವ 'ಬಹುರೂಪಿ ಗಾಂಧಿ' ಮತ್ತು ಅಸ್ಸಾ ನಾಡಿಯಾ ’ಅಮ್ಮನಿಗೆ ಹಜ್ ಬಯಕೆ’ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE