ಸಾಧಕರೊಡನೆ ವ್ಯಕ್ತಿಚಿತ್ರಗಳು ಎಂಬ ಪುಸ್ತಕವು ಜ್ಯೋತ್ಸ್ನಾ ಕಾಮತ್ ಅವರ ಕೃತಿಯಾಗಿದೆ. ಸ್ವಾತಂತ್ರ್ಯದ ಮೊದಲ ವರ್ಷಗಳ ಪರಸ್ಪರ ದ್ವೇಷ ರಕ್ತಾಪಾತಗಳನ್ನು ಕಳೆದ ಮೂರು ದಶಕಗಳ ದೀರ್ಘಾವಧಿಯಲ್ಲಿ (1947-1977) ಜನ ಮರೆತಂತೆ ಇತ್ತು. ಸಾಕಷ್ಟು ಧೀಮಂತರು ಅಂದಿನ ಪೂರ್ವ ಪಾಕಿಸ್ತಾನದ ಭಾಗವಾಗಿದ್ದ ಪೂರ್ವ ಬಂಗಾಲವನ್ನು ತ್ಯಜಿಸಿ, ನಿರಾಶ್ರಿತರಾಗಿ ಪಶ್ಚಿಮ ಬಂಗಾಲಕ್ಕೆ ಬಂದರೂ, ತಮ್ಮ ವಿದ್ವತ್ತು, ಪರಿಶ್ರಮದಿಂದ ದತ್ತು ಬಂದ ನಾಡನ್ನು ಶ್ರೀಮಂತಗೊಳಿಸಿದ್ದರು. ಅಂಥವರಲ್ಲಿ ಕೆಲವರನ್ನು ಭೇಟಿ ಮಾಡುವ, ಮಾತನಾಡಿಸುವ ಅವಕಾಶ ಸಿಕ್ಕಿತ್ತು. ಬಲುಬೇಗ ಅವರು ಪೂರ್ವ ಬಂಗಾಲದ ದೈನಂದಿನ ಜೀವನದ ಭಾಗವಾಗಲು, ಭಾಷೆ, ಜೀವನ ಪದ್ಧತಿ, ಮತ್ತು ನಂಬಿರುವ ಮೌಲ್ಯಗಳು ಸಾಮಾನ್ಯವಿದ್ದುದೇ ಕಾರಣ. ಪಶ್ಚಿಮ ಬಂಗಾಲದಲ್ಲೆ ಅದೂ ಕಲ್ಕತ್ತೆಯಲ್ಲೇ ಬೇರುಬಿಟ್ಟ ಜನ ಈ ಆಗಂತುಕರನ್ನು ಅಸಮಾಧಾನದಿಂದಲೇ ಬರಮಾಡಿಕೊಂಡದ್ದನ್ನೂ ಕಂಡಿದ್ದೆ. ಈ ಎಲ್ಲಾ ವಿಚಾರಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಲೇಖಕಿ ಜೋತ್ಸ್ನಾ ಕಾಮತ್ ಪುಸ್ತಕದ ಬಗ್ಗೆ ತಿಳಿಸಿದ್ದಾರೆ.
ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...
READ MORE