ನಾಡಿನ ನಕ್ಷತ್ರಗಳ ಪುಸ್ತಕವು ವ್ಯಕ್ತಿಚಿತ್ರಗಳ ಕೃತಿ, ವ್ಯಕ್ತಿಚಿತ್ರಗಳನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಬರೆಯುವ ಪದ್ಧತಿಯುಂಟು. ಮೊದಲನೆಯ ಪದ್ಧತಿಯನ್ನು ಸಂಕ್ಷಿಪ್ತವಾಗಿ ಗಮನಿಸೋಣ. ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ್ ಮುಂತಾದ ಮಹನೀಯರ ಬಗ್ಗೆ ವ್ಯಕ್ತಿ ಚಿತ್ರಗಳನ್ನು ಬರೆಯಬಹುದು. ಇಂತಹ ವ್ಯಕ್ತಿಚಿತ್ರಗಳಲ್ಲಿ ನಿಗದಿತ ವ್ಯಕ್ತಿಯ ಬದುಕು-ಸಾಧನೆಯ ಸಂಕ್ಷಿಪ್ತ ಚಿತ್ರಣವಿರುತ್ತದೆ. ಸಾಮಾನ್ಯವಾಗಿ 1000-1500 ಪದಗಳ ಮಿತಿಯಿರುತ್ತದೆ. ಇಂತಹ ಬರಹವನ್ನು ಓದಿದಾಗ, ಆ ವ್ಯಕ್ತಿಯ ಬದುಕಿನ ಬಗ್ಗೆ ಒಂದು ಸ್ಥೂಲ ಪರಿಕಲ್ಪನೆಯು ಓದುಗನಿಗೆ ಬರುತ್ತದೆ. ನಾವು ಏಕೆ ಈ ವ್ಯಕ್ತಿಯ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕು, ಇದರಿಂದ ನನಗೇನು ಲಾಭ, ಈ ನಾಡಿನ ನಿರ್ಮಾಣದಲ್ಲಿ ಇವರ ಪಾಲು ಎಷ್ಟು ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರವು ದೊರೆಯುತ್ತದೆ. ಈ ಓದಿನಿಂದ ನಮ್ಮ ಸಾಮಾನ್ಯ ತಿಳಿವಳಿಕೆ ಹೆಚ್ಚುವುದರ ಜೊತೆಯಲ್ಲಿ, ಇಂತಹವರ ಬದುಕಿನಿಂದ ಸ್ಫೂರ್ತಿಯನ್ನು ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ನಾ.ಸೋಮೇಶ್ವರ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.