ಡುಂಡಿರಾಜ್ ತಮ್ಮ ಹನಿಗವನ ಮತ್ತು ಲಘುಪ್ರಬಂಧಗಳ ಮೂಲಕ ಅತ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಲು ಸಫಲರಾಗಿದ್ದಾರೆ. ತಮ್ಮ ಪ್ರತಿಯೊಂದು ಪುಸ್ತಕದಲ್ಲಿಯೂ ಕೂಡ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಓದುಗರನ್ನು ಕೇವಲ ನಗೆಗಡಲಲ್ಲಿ ತೇಲಿಸುವುದಲ್ಲದೇ ಸಾಮಾಜಿಕ ಜವಾಬ್ದಾರಿಯ ಕುರಿತಾದ ಚಿಂತನೆಗಳನ್ನು ಮೂಡಿಸುವಲಲ್ಲಿ ಸಫಲರಾಗಿದ್ದಾರೆ. ಇಂತಹ ಒಬ್ಬ ಕವಿಯ/ಲೇಖಕನ ಕುರಿತಾಗಿ, ಅವರ ಬರೆವಣಿಗೆಯ ಶೈಲಿಯ ಕುರಿತಾಗಿ ವಿಶ್ಲೇಷಿಸಿ ಬರೆದಂತಹ ಪುಸ್ತಕ ವಿನೋದ ಸಾಹಿತ್ಯದ ಸಾಹಿತಿ ಡುಂಡಿರಾಜ್.
ಕನ್ನಡದ ಓರ್ವ ಹೆಸರಾಂತ ಲೇಖಕರಾದ ಜಿ ಎನ್ ಉಪಾಧ್ಯ ಡುಂಡಿರಾಜರ ಸಾಹಿತ್ಯದ ಕುರಿತಾದ ಸವಿವರ ವಿಶ್ಲೇಷಣೆ ಹಾಗೂ ಅವರ ಬರೆವಣಿಗೆ ಶೈಲಿಯ ಪ್ರಾಮುಖ್ಯತೆಯ ಕುರಿತಾದ ವಸ್ತು ವಿಷಯಗಳನ್ನು ಡುಂಡಿರಾಜ್‍ರವರ ಅಭಿಮಾನಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡುಂಡಿರಾಜರ ಹನಿಗವನಗಳಿಂದ ಪ್ರಭಾವಿತರಾಗಿ ಅದೇ ಮಾದರಿಯಲ್ಲಿ ಕಿರು ಕವಿತೆಗಳನ್ನು ರಚಿಸುತ್ತಾ ಬಂದವರ ಸಂಖ್ಯೆ ಬಹಳ ದೊಡ್ಡದು.
ಕಾವ್ಯದ ಸಿದ್ಧ ಮಾದರಿಯನ್ನು ಬಿಟ್ಟುಕೊಟ್ಟು, ಹೊಸ ಮಾದರಿಯ ಕವಿತೆಗಳನ್ನು ರಚಿಸಿ ಅಪಾರ ಓದುಗ ವರ್ಗವನ್ನು ಖುಷಿಪಡಿಸಿದ ಅಪರೂಪದ ಸಾಹಿತಿ ಡುಂಡಿರಾಜ್. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರು ಮಾಡಿರುವ ವಿವಿಧ ಪ್ರಯೋಗಗಳು ಗಮನಿಸುವಂಥದ್ದಾಗಿವೆ. ಹೀಗಾಗಿ ಪುಸ್ತಕ ಡುಂಡಿರಾಜರ ಕುರಿತಾಗಿ ಅರಿಯಲು ಇರುವ ಕೈಗನ್ನಡಿ.
©2024 Book Brahma Private Limited.