'ಮಿನುಗು ನೋಟ’ ಎಂ.ಜಿ. ಹೆಗಡೆ ಅವರು ರಚಿಸಿರುವ ಮಹಾತ್ಮ ಗಾಂಧಿ ಕುರಿತ ಕೃತಿಯಾಗಿದೆ. ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಎಂ. ಜಿ ಹೆಗಡೆ ಸಾಕಷ್ಟು ಅಧ್ಯಯನ ಮಾಡಿ ಈ ಹೊತ್ತಿಗೆಯನ್ನು ರಚಿಸಿದ್ದಾರೆ. ಇದರಿಂದ ಗಾಂಧೀಜಿಯನ್ನು ಇನ್ನಷ್ಟು ಆಳವಾಗಿ ಅರಿಯಲು ಸಾಧ್ಯವಾಗಬಹುದು. ಟೀಕೆ ಮುಗಿದ ಮೇಲೂ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ಗೌರವಿಸಲು ಕಾರಣಗಳು ಉಳಿದರೆ ಅಂತವರು ಶ್ರೇಷ್ಠರಾಗುತ್ತಾರೆ. ಗಾಂಧೀ ಕೂಡಾ ಹಾಗೆ. ಅವರ ವಿಚಾರಗಳ ಕುರಿತು ಚರ್ಚೆ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಗಾಂಧೀಜಿಯವರ ಮತ್ತು ಅವರ ತತ್ವಗಳ ಬಗ್ಗೆ ಎದ್ದ ಪ್ರಶ್ನೆಗಳಿಗೆ, ಭಿನ್ನಾಭಿಪ್ರಾಯಗಳಿಗೆ, ಟೀಕೆಗಳಿಗೆ ಉತ್ತರಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. "ವಾಸ್ತವಾಗಿ ನಾನು ಹಿಡಿದಿರುವುದು (ಕಂಡಿರುವುದು) ಅತ್ಯುನ್ನತ ತೇಜಸ್ಸಿನ ಅತಿ ಮಂಕಾದ ಮಿನುಗು ನೋಟವನ್ನು ಮಾತ್ರ. ನನ್ನ ಎಲ್ಲ ಪ್ರಯೋಗಗಳ ಪರಿಣಾಮದಿಂದಾಗಿ ನಾನು ಗ್ರಹಿಸಿಕೊಂಡಿರುವುದೇನೆಂದರೆ ಸತ್ಯದ ಪರಿಪೂರ್ಣ ದರ್ಶನ ಅಹಿಂಸೆಯ ಸಾಕ್ಷಾತ್ಕಾರವನ್ನು ಮಾತ್ರ ಅನುಸರಿಸಬಲ್ಲದು. ಇಷ್ಟು ಮಾತ್ರ ನಾನು ದೃಢವಾಗಿ ಹೇಳಬಲ್ಲೆ" ಎಂಬುದು ಸ್ವತಃ ಗಾಂಧೀಜಿ ತಮ್ಮ ಆತ್ಮಕತೆಯಲ್ಲಿ ಹೇಳಿದ ಮಾತುಗಳು. ಅದು ಈ ಕೃತಿಗೂ ಅನ್ವಯಿಸುತ್ತದೆ.
©2025 Book Brahma Private Limited.