ಎಲ್ಲೆಲ್ಲೂ ಸಂಗೀತವೇ

Author : ಎನ್.ಎಸ್. ಶ್ರೀಧರಮೂರ್ತಿ

Pages 156

₹ 195.00




Year of Publication: 2024
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಎಲ್ಲೆಲ್ಲೂ ಸಂಗೀತವೇ’ ಎನ್‌. ಎಸ್‌. ಶ್ರೀಧರ ಮೂರ್ತಿ ಅವರ ವ್ಯಕ್ತಿಚಿತ್ರಣ ಕೃತಿಯಾಗಿದ್ದು, ಇಲ್ಲಿ ವಿಜಯಭಾಸ್ಕ‌ರ್ ಅವರ ಜೀವನ ಸಾಧನೆಗಳ ವಿಚಾರಗಳಿವೆ. ವಿಜಯಭಾಸ್ಕ‌ರ್ ಸಂಗೀತ ನಿರ್ದೇಶನಕ್ಕೇ ಘನತೆ, ಗೌರವಗಳನ್ನು ತಂದವರು.ಚಿತ್ರಕ್ಕೆ ಏನು ಬೇಕು ಎನ್ನುವುದರ ಕಡೆಗೆ ಸದಾ ಅವರ ಚಿತ್ತ ಇರುತ್ತಿತ್ತು. ಸಂಗೀತವನ್ನು ಎಷ್ಟು ಆಳವಾಗಿ ಬಲ್ಲರೋ, ಸಾಹಿತ್ಯವನ್ನೂ ಕೂಡ ಅಷ್ಟೇ ಆಳವಾಗಿ ತಿಳಿದವರು. ಚಿತ್ರದ ಅಗತ್ಯವನ್ನು ಅರಿತು ಸಂಗೀತವನ್ನು ನೀಡುತ್ತಿದ್ದರು. ಹಾಡನ್ನು ರಂಜಕೀಯವಾಗಿಸುವುದು ಎಂದಿಗೂ ಅವರ ಉದ್ದೇಶವಾಗಿರಲಿಲ್ಲ. ಅದು ಕಥೆಯ ಹಂದರದಲ್ಲಿ ಸೇರಬೇಕು, ಪಾತ್ರದ ಅಭಿವ್ಯಕ್ತಿಯಾಗಬೇಕು, ಜನರ ಮನದಲ್ಲಿ ಉಳಿದುಕೊಳ್ಳಬೇಕು ಎನ್ನುವುದನ್ನು ಸದಾ ಚಿಂತಿಸುತ್ತಿದ್ದರು, ಹೀಗಾಗಿ ಅವರು ಸೃಷ್ಟಿಸಿದ ಗೀತೆಗಳು ಇಂದಿಗೂ ಅಮರವಾಗಿ ಉಳಿದಿವೆ. ವಿಜಯಭಾಸ್ಕ‌ರ್ ಕನ್ನಡಕ್ಕೆ ಟೈಟಲ್ ಕಾರ್ಡ್ ತೋರಿಸುವಲ್ಲಿ ಹೊಸತನ ತಂದರು, ಥೀಂ ಮ್ಯೂಸಿಕ್ ತಂದರು, ಶಾಟ್ ಡಿವಿಷನ್ಗಳನ್ನು ತಂದರು, ಹೊಸ ವಾದ್ಯಗಳನ್ನು ಬಳಸಿದರು, ಬಹಳ ಮುಖ್ಯವಾಗಿ ಕನ್ನಡದ ಗಾಯಕರನ್ನು ಹುಡುಕಿ ಅವರ ಬಳಿ ಹಾಡಿಸಿದರು. ವಿಜಯಭಾಸ್ಕ‌ರ್ ಇದ್ದಲ್ಲಿ ಹೊಸತನ ಮತ್ತು ಪ್ರಯೋಗಶೀಲತೆ ಇದ್ದೇ ಇರುತ್ತಿತ್ತು. ಹೀಗಾಗಿ ಅವರು ವ್ಯಾಪಾರಿ ಚಿತ್ರಗಳಂತೆ ಕಲಾತ್ಮಕ ಚಿತ್ರಗಳಿಗೂ ವರದಾನವಾದರು. ವಿಜಯಭಾಸ್ಕ‌ರ್ ಗೀತ ರಚನೆಕಾರರ, ಸಂಗೀತ ನಿರ್ದೇಶಕರ ಹಕ್ಕುಗಳಿಗೆ ಹೋರಾಡಿದರು. ಹೀಗೆ ವಿಜಯಭಾಸ್ಕ‌ರ್ ಅವರ ಕುರಿತಾದ ಸಂಗತಿಗಳು ಈ ಪುಸ್ತಕದಲ್ಲಿ ಓದುಗರು ತಿಳಿಯಬಹುದು.

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books