ಅಂಬೇಡ್ಕರ್ ಥಾಟ್ಸ್ ಎಂಬುದು ಪ್ರೊ.ಎನ್.ಆರ್. ಶಿವರಾಂ ಅವರು ರಚಿಸಿದ ಕೃತಿ. ಆಧುನಿಕ ಭಾರತದ ನಿರ್ಮಾಪಕ ಡಾ.ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ಅವರು ‘ಭಾರತದ ಸಂವಿಧಾನ’ ರಚಿಸಿದರು. ಇಡೀ ಜಗತ್ತಿಗೇ ಮಾದರಿಯಾಗಿರುವ ‘ಪ್ರಜಾಪ್ರಭುತ್ವ’ ವ್ಯವಸ್ಥೆಯನ್ನು ನೀಡಿದರು. ಭಾರತ ಕುರಿತು ಅವರ ಕಲ್ಪನೆಗಳು, ಸಂಸ್ಕೃತಿಯ ಹಿರಿಮೆ ಮಾತ್ರವಲ್ಲ; ಇಲ್ಲಿಯ ಜಾತಿಯ ವ್ಯವಸ್ಥೆ, ಮಾನವೀಯತೆ ಎಲ್ಲವುಗಳ ಕುರಿತು ಮಾತನಾಡಿದ, ಉಪನ್ಯಾಸ ನೀಡಿದ, ಬರಹಗಳ ಚಿಂತನೆಯ ಮೂಲಕ ಅವರು ಸಾರಿದ ಸಂದೇಶಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡುವ ಯತ್ನ ಕಾಣಬಹುದು. ಶಿಕ್ಷಣ, ಮಹಿಳೆ, ಕಾರ್ಮಿಕ, ಸಂವಿಧಾನ, ಪ್ರಜಾಪ್ರಭುತ್ವ, ಅರ್ಥಶಾಸ್ತ್ರ, ಇತಿಹಾಸ ಸೇರಿದಂತೆ ಹಲವಾರು ವಿಷಯಗಳ ಮೇಲೆ ಡಾ. ಅಂಬೇಡ್ಕರ್‌ರವರ ವಿಚಾರಗಳನ್ನು ಸಂಗ್ರಹಿಸಿದ್ದ ಈ ಕೃತಿಯ ವೈಶಿಷ್ಟ್ಯ.
ಪ್ರೊ. ಎನ್.ಆರ್. ಶಿವರಾಂ ಅವರು ಚಿಂತಕರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕದಿರಹಳ್ಳಿಯವರು. ತಂದೆ ಆರ್. ರಾಮಯ್ಯ, ತಾಯಿ ಗಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಗಣಿತ) ಪದವೀಧರರು. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಡಾ. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಕೃತಿಗಳು: ಅಂಬೇಡ್ಕರ್ ಥಾಟ್ಸ್, ಪುಸ್ತಕ ಪ್ರೇಮಿ ಡಾ. ಅಂಬೇಡ್ಕರ್. ...
READ MORE